ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಗ್ರಾಮಗಳ ಜನರಿಗೆ ತಾವರಗಟ್ಟಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ನಿಯತಿ ಫೌಂಡೇಶನ್ ಮತ್ತು ನಂದಾದೀಪ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಖಾನಾಪುರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಹಾಗೂ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಅವರ ನೇತ್ರತ್ವದಲ್ಲಿ ಕಣ್ಣು ತಪಾಸಣಾ ಶಿಬಿರ ನಡೆಯಿತು. ತಾಲೂಕಿನ ಗಡಿಭಾಗದಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿರುವ ತಾವರಗಟ್ಟಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರಶುರಾಮ್ ಕೋಲಕಾರ, ಕಣ್ಣು ಮನುಷ್ಯನ ದೇಹದ ಅತೀ ಮುಖ್ಯವಾದ ಅಂಗಗಳಲ್ಲಿ ಒಂದಾಗಿದೆ. ಕಣ್ಣಿನ ತೊಂದರೆ ಇರುವವರು ಚಿಕಿತ್ಸೆ ಪಡೆದುಕೊಂಡು ಉತ್ತಮ ಆರೋಗ್ಯ ಪಡೆಯುವ ಸಲುವಾಗಿ ಡಾ. ಸೋನಾಲಿ ಸರ್ನೋಬತ್ ಅವರು ಈ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದಾರೆ. ಎಲ್ಲರೂ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಬಿಜೆಪಿ ಬೂತ್ ಅಧ್ಯಕ್ಷ ದೇವರಾಜ್ ಮಿರಾಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲ್ಲಪ್ಪ ಕಂಗ್ರಾಕರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ಪ್ರಮುಖರಾದ ನಾಗೇಶ್ ರಾಮಜಿ. ಸಚಿನ್ ಪಾಟೀಲ್, ರಾಜು ಕಾಕತ್ಕರ್, ಶ್ರೀನಾಥ್ ಹುಲಮನಿ. ಪಕ್ಷದ ಮಹಿಳಾ ಘಟಕದ ಪ್ರಮುಖರಾದ ಭರತಾ ತಕ್ಕಡಿ, ನಂದಾದೀಪ ಆಸ್ಪತ್ರೆಯ ಸಿಬ್ಬಂದಿ, ಡಾ. ಸೋನಾಲಿತಾಯಿ ಅಭಿಮಾನಿ ಬಳಗದವರು ಮಹಿಳೆಯರು ಉಪಸ್ಥಿತರಿದ್ದರು.
ಬೆಳಗಾವಿ ನಗರದಲ್ಲಿ ಈದ್-ಇ-ಮಿಲಾದ್ ಹಬ್ಬದ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ
https://pragati.taskdun.com/local/route-changed-in-belagavi-city-on-sunday-eid-milad-procession/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ