Kannada NewsKarnataka NewsLatest

ಇಂದಿನಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ

ಪ್ರಗತಿವಾಹಿನಿ ಸುದ್ದಿ, ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 27ರಿಂದ 30ರವರೆಗೆ ಜರುಗಲಿದೆ.

ಮೇ 27ರಂದು ಬೆಳಗ್ಗೆ 7ಗಂಟೆಗೆ ಸ್ಥಳೀಯ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಕುಂಕುಮ ಮತ್ತು ಮಹಾಪೂಜೆ, ಸಂಜೆ 5 ಗಂಟೆಗೆ ಓಕುಳಿ ಕೊಂಡ ಪೂಜೆ, ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಮೇ 28ರಂದು ಬೆಳಗ್ಗೆ 7ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಂಜೆ 5 ಗಂಟೆಗೆ ನಡು ಓಕುಳಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ 29ರಂದು ಬೆಳಗ್ಗೆ7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ ಬಳಿಕ ಬೆಳಗ್ಗೆ 8 ಗಂಟೆಯಿಂದ ಪುರಜನರಿಂದ ಮಾರುತಿ ದೇವರ ದೇವಾಲಯದಲ್ಲಿ ಪೂಜೆ-ಪುನಸ್ಕಾರ, ನೈವೇದ್ಯ, ಹರಕೆ ಸಮರ್ಪಣೆ ನಡೆದು, ಸಂಜೆ 5 ಗಂಟೆಗೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ ಪಲ್ಲಕ್ಕಿ ಪ್ರದಕ್ಷಿಣೆ ಬಳಿಕ ಕಡೆ ಓಕಳಿ ನಡೆಯಲಿದ್ದು, ವಿವಿಧ ಪ್ರಾಣಿಗಳ ಸೊಗಿನ ಕುಣಿತದ ಪ್ರದರ್ಶನ, ಅದೇ ದಿನ ರಾತ್ರಿ 10.30ಕ್ಕೆ ಸ್ಥಳೀಯ ಜೈ ಹನುಮಾನ ನಾಟ್ಯ ಸಂಘದವರಿಂದ ‘ಸಿಡಿದೆದ್ದ ಬೆಟಗೇರಿ ಹುಲಿ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ.

Home add -Advt

ಮೇ 30 ರಂದು ಬೆಳಗ್ಗೆ 7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯಲಿದೆ ಎಂದು ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

https://pragati.taskdun.com/linganamath-village-panchayat-locked-and-protested/
https://pragati.taskdun.com/female-leopard-died-due-to-illness/
https://pragati.taskdun.com/life-life-threatening-tobacco-this-is-the-perfect-opportunity-to-be-free-from-addiction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button