Belagavi NewsBelgaum NewsKarnataka News

*”ಯುವ ಸಮುದಾಯಕ್ಕೆ ಗಾಂಧಿ”: ಮೂರು ದಿನಗಳ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಧುನಿಕ ಜಗತ್ತಿಗೆ ಗಾಂಧಿ ತತ್ವಗಳ ಅರಿವು ಮತ್ತು ಪ್ರಚಾರಗಳ ತರಬೇತಿಯ “ಯುವ ಸಮುದಾಯಕ್ಕೆ ಗಾಂಧಿ” ಮೂರು ದಿನಗಳ ಕಾರ್ಯಾಗಾರವು ಮೇ 23 ರಿಂದ ಮೇ. 25 ರ ವರೆಗೆ ಘಟಪ್ರಭಾದ ಡಾ.ಎನ್.ಎಸ್. ಹರ್ಡಿಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಜರುಗಲಿದೆ.

ಮೇ. 23 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರಕ್ಕೆ ಚಾಲನೆ ದೊರಕಲಿದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷರಾದ ಎನ್.ಆರ್.ವಿಶುಕುಮಾರ ಹಾಗೂ ಆಕಾಶವಾಣಿ ನಿವೃತ್ತ ನಿರ್ದೇಶಕರಾದ ಸಿ.ಯು.ಬೆಳ್ಳಕ್ಕಿ ಅವರುಗಳು ಉಪಸ್ಥಿತರಿರುವರು. ಮುಂಜಾನೆ 11 ಗಂಟೆಗೆ ಕಮ್ಮಟದ ರೂಪುರೇಷೆಗಳ ವಿವರಣೆ, ಮಧ್ಯಾಹ್ನ 12 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಗಾಂಧಿ, ಮಧ್ಯಾಹ್ನ 2.30 ರಿಂದ 4.30 ಹಾಗೂ ಸಾಯಂಕಾಲ 5 ಗಂಟೆಯಿಂದ 7 ಗಂಟೆಯವರೆಗೆ ಗಾಂಧಿ ಚಲನಚಿತ್ರಗಳ ಪ್ರದರ್ಶನ ಹಾಗೂ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸಂವಾದ ಮತ್ತು ಚರ್ಚೆಗಳು ಜರುಗಲಿವೆ.

Home add -Advt

ಮೇ.24 ಶನಿವಾರದಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ಮತ್ತು ಯುದ್ಧ ಕುರಿತು ಪೂರ್ಣಚಂದ್ರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಶಿವಾರೆಡ್ಡಿ ಅವರು ಉಪನ್ಯಾಸ ನೀಡುವರು. ಮುಂಜಾನೆ 11 ಗಂಟೆಗೆ ಕ್ಲಬ ಹೌಸ್ ಬಳಕೆ, ಓದುವ ಕಲೆ, ಮಧ್ಯಾಹ್ನ 2 ಗಂಟೆಗೆ ಆಡಿಯೋ ಎಡಿಟಿಂಗ್ ಮತ್ತು ಯೂಟ್ಯೂಬ್ ಚಾಲನೆ, ಸಾಯಂಕಾಲ 5 ಗಂಟೆಗೆ ವಿದೇಶಗಳಲ್ಲಿ ಗಾಂಧಿ ಪ್ರಭಾವ ಕುರಿತು ಅನಿವಾಸಿ ಭಾರತೀಯರೊಂದಿಗೆ ಚರ್ಚೆ, ರಾತ್ರಿ 8 ಗಂಟೆಗೆ ಪೋಸ್ಟರ್ ಮತ್ತು ರೀಲ್ಸ್ ಮಾಡುವ ಕಲೆ ಕುರಿತು ಮಾಹಿತಿ ನೀಡಲಾಗುವುದು.

ಮೇ.25 ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಪೋಸ್ಟರ ಮತ್ತು ರೀಲ್ಸ್ ಮಾಡುವ ಚಟುವಟಿಕೆ, ಬೆಳಿಗ್ಗೆ 11 ಗಂಟೆಗೆ ಮುಂದೆ ಲೇಖನಗಳನ್ನು ಬರೆಯಬೇಕಾದ ವಿಷಯಗಳು ಗಾಂಧಿ ಸಂಬಂಧಿತ ಮತ್ತು ಗಾಂಧಿ ಪ್ರೇರಿತ ಪ್ರಮುಖ ಪುಸ್ತಕಗಳು, ಮಧ್ಯಾಹ್ನ 2 ಗಂಟೆಗೆ ಸಂದರ್ಶನ ಮತ್ತು ಪ್ರಶೋತ್ತರಗಳು ಜರುಗಲಿವೆ. ಅನಂತ್ ಶಾಂದ್ರೆಯ ಜಗದೀಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭಜರುಗಲಿದ್ದು ದಿ. ಹಿಂದೂ ಪತ್ರಿಕೆ ಬೆಳಗಾವಿ ಹಿರಿಯ ಸಹಾಯಕ ಸಂಪಾದಕರಾದ ಹೃಷಿಕೇಶ್ ದೇಸಾಯಿ, ಶಿಬಿರದ ನಿರ್ದೇಶಕರಾದ ವಿಜಯ್ ಹನಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

Related Articles

Back to top button