
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿಯೇ ಮಹಿಳೆಯೊಬ್ಬರ ಮೆಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ ರೈಲು ನಿಲ್ದಾಣದಲ್ಲಿ 30 ವರ್ಷದ ಮಹಿಳೆ ಮೇಲೆ ರೈಲ್ವೆ ಉದ್ಯೋಗಿಗಳೇ ಗ್ಯಾಂಗ್ ರೇಪ್ ನಡೆಸಿದ್ದು, ಪ್ರಕರಣ ಸಂಬಂಧ ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸತೀಶ್ ಕುಮಾರ್(35), ವಿನೋದ್ ಕುಮಾರ್(38), ಮಂಗಲ್ ಚಂದ್ (33) ಹಾಗೂ ಜಗದೀಶ್ ಚಂದ್ (37) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ರೈಲ್ವೆ ಎಲೆಕ್ಟ್ರಿಕ್ ವಿಭಾಗದ ಉದ್ಯೋಗಿಗಳಾಗಿದ್ದಾರೆ. ತಡರಾತ್ರಿ ಪ್ಲಾಟ್ ಫಾರ್ಮ್ ನಲ್ಲಿರುವ ರೈಲ್ವೆ ಸ್ಟೇಷನ್ ರೂಮಿನಲ್ಲಿ ಮಹಿಳೆ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರ ನಡೆಸಿದ್ದು, ಇನ್ನಿಬ್ಬರು ಆರೋಪಿಗಳು ಹೊರಗೆ ಕಾವಲು ನಿಂತಿದ್ದಾರೆ. ಬಳಿಕ ಅವರೂ ಕೂಡ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತ ಮಹಿಳೆ ಆರೋಪಿ ಸತೀಶ್ ಗೆ ಪರಿಚಯದವಲಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ದೆಹಲಿ ರೈಲ್ವೆ ನಿಲ್ದಾಣಕ್ಕೆ ಕರೆಸಿದ್ದ. ಬಳಿಕ ತನ್ನ ಮಗನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆಕೆಯನ್ನು ಮನೆಗೂ ಆಹ್ವಾನಿಸಿದ್ದ. ಬಳಿಕ ರೈಲ್ವೆ ನಿಲ್ದಾಣದಲ್ಲಿಯೇ ರೂಮ್ ನಲ್ಲಿ ಇರುವಂತೆ ಸೂಚಿಸಿದ್ದ ಸತೀಶ್, ತನ್ನ ಗೆಳೆಯರಿಗೆ ಪರಿಚಯಿಸಿದ್ದ. ಬಳಿಕ ಆಕೆಯ ಮೇಲೆಯೇ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಕಮಿಷ್ನರ್ ಕಚೇರಿ ಬಳಿಯೇ ದರೋಡೆ; ಕಾರಲ್ಲಿದ್ದ 4.5 ಲಕ್ಷ ಕದ್ದು ಎಸ್ಕೇಪ್ ಆದ ಕಳ್ಳರು