Karnataka News

*ಸಾಲ ಮರುಪಾವತಿಸದಿದ್ದರೆ ನಗ್ನಚಿತ್ರ ವೈರಲ್ ಬೆದರಿಕೆ: ಖಾಸಗಿ ಚಾನೆಲ್ ಕ್ಯಾಮರಾಮೆನ್ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಆಪ್ ಮೂಲಕ ಪಡೆದಿದ್ದ ಸಾಲ ಮರುಪಾವತಿ ಮಾಡದಿದ್ದರೆ ನಗ್ನಚಿತ್ರ ಎಡಿಟ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಕಿರುಕುಳಕ್ಕೆ ಬೇಸತ್ತ ಖಾಸಗಿ ಚಾನಲ್ ಕ್ಯಾಮರಾ ಮೆನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

32 ವರ್ಷದ ಕಿರಣ್ ಆತ್ಮಹತ್ಯೆಗೆ ಶರಣಾದವರು. ಬೆಂಗಳೂರಿನ ಉತ್ತರ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಖಾಸಗಿ ಚಾನೆಲ್ ಕ್ಯಾಮರಾಮೆನ್ ಆಗಿದ್ದ ಕಿರಣ್, ಆಪ್ ವೊಂದರಿಂದ 2 ಲಕ್ಷ ಸಾಲ ಪಡೆದಿದ್ದರು.

Home add -Advt

ಸಾಲ ವಾಪಾಸ್ ಕೊಡದಿದ್ದರೆ ನಗ್ನಚಿತ್ರ ವೈರಲ್ ಮಾಡುವುದಾಗಿ ಕಿಡಿಗೇಡಿಗಳು ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ನೊಂದ ಕಿರಣ್ ಆತ್ಮಹತ್ಯೆ ಮಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button