Belagavi NewsBelgaum NewsKannada NewsKarnataka News

*ಅಧಿಕಾರಿ ಮನೆ ಮುಂದೆ ಕಸ ಹಾಕಿ: ಪ್ರಕಾಶ ಹುಕ್ಕೇರಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ತೀವ್ರ ಅಸಮಾಧಾನಗೊಂಡ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರು, ಪಟ್ಟಣದ ಮುಖ್ಯಾಧಿಕಾರಿ ಜಗದೀಶ್ ಈಟಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ನಗರದಲ್ಲಿ ಎಲ್ಲಾದರೂ ಕಸ ಕಂಡರೆ, ಅದನ್ನು ನೇರವಾಗಿ ಮುಖ್ಯಾಧಿಕಾರಿ ಮನೆಯ ಮುಂದೆ ಹಾಕಿ ಎಂದು ಸೂಚಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಚಿಕ್ಕೋಡಿ ಪಟ್ಟಣದ ಮುಲ್ಲಾಪ್ಲಾಟ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಕಸ ವಿಲೇವಾರಿ ಸಮಸ್ಯೆಯನ್ನು ಹುಕ್ಕೇರಿ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ ಹುಕ್ಕೇರಿ, ತಾನು ಈ ಹಿಂದೆ ಹಲವು ಬಾರಿ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದರೂ, ಅವರು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ಅವರ ತರಾಟೆಯ ನಂತರ, ಮುಖ್ಯಾಧಿಕಾರಿ ಜಗದೀಶ್ ಈಟಿ ಅವರು ನಾಳೆಯಿಂದಲೇ ಕಸ ಸ್ವಚ್ಛತೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Home add -Advt

Related Articles

Back to top button