Uncategorized

ಗ್ಯಾಸ್ ಸಿಲಿಂಡರ್ ಸ್ಫೋಟ: ಆಶಾ ಕಾರ್ಯಕರ್ತೆಗೆ ಹಣಕಾಸಿನ ನೆರವು ನೀಡಿದ ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹಾನಿಗೊಳಗಾದ ಆಶಾ ಕಾರ್ಯಕರ್ತೆಗೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಸಾಂತ್ವನ ಹೇಳಿ ನೆರವು ನೀಡಿದ್ದಾರೆ.

ಖಾನಾಪುರದ ಶಿವಾಜಿ ನಗರದ ಟೀಚರ್ಸ್ ಕಾಲೋನಿಯಲ್ಲಿ ಇಂದು ಆಶಾ ಕಾರ್ಯಕರ್ತೆ ರೇಖಾ ಸಂಜಯ ಪಾಟೀಲ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.  ಈ ಸಂದರ್ಭದಲ್ಲಿ ರೇಖಾ ಅವರ ಮಾವ ನಾಗೇಶ ಪಾಟೀಲ್ ಅವರು ಮಾತ್ರ ಮನೆಯಲ್ಲಿದ್ದರು. ಅದೃಷ್ಟವಶಾತ್ ಅವರು ಯಾವುದೇ ಅಪಾಯಕ್ಕೆ ಸಿಲುಕದೆ ಪಾರಾಗಿದ್ದಾರೆ.

ಸಮಾಜ ಸೇವಕ ವಿನಾಯಕ ಮುತಗೇಕರ ಅವರು ನೀಡಿದ ಮಾಹಿತಿಯನ್ನಾಧರಿಸಿ ರೇಖಾ ಅವರ ನಿವಾಸಕ್ಕೆ ಭೇಟಿ ನೀಡಿದ ಡಾ. ಸೋನಾಲಿ ಸರ್ನೋಬತ್ ಅವರು,  ಕುಟುಂಬಕ್ಕೆಹಣಕಾಸಿನ ಸಹಾಯ ನೀಡಿದರು. ಇದಲ್ಲದೆ ಕುಟುಂಬಕ್ಕೆ ಮತ್ತಷ್ಟು ಸಹಾಯ ಮಾಡುವ ಭರವಸೆ ನೀಡಿದರು.

ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಭಾಗಿ

Home add -Advt

https://pragati.taskdun.com/mlc-channaraja-hattiholi-participated-in-the-opening-ceremony-of-the-temple/

ಕುಡಿದ ಮತ್ತಿನಲ್ಲಿ ಸೋದರನಿಗೇ ಚೂರಿ ಇರಿದು ಕೊಲೆ

https://pragati.taskdun.com/drunk-brother-stabbed-to-death/

​ಬೆಳಗಾವಿ ಗ್ರಾಮೀಣ ಕ್ಷೇತ್ರದ 10 ಗ್ರಾಮ, ಶಾಲೆಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿ ವಿತರಣೆ​

https://pragati.taskdun.com/distribution-of-gym-and-sports-equipment-to-10-villages-and-schools-of-belagavi-rural-constituency/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button