Latest

*ಗ್ಯಾಸ್ ಗೀಜರ್ ನಿಂದ ವಿಷಾನೀಲ ಸೋರಿಕೆ; ಗೋಕಾಕ್ ಮೂಲದ ಯುವತಿ ಸೇರಿ ಇಬ್ಬರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನೆಯಲ್ಲಿದ್ದ ಗ್ಯಾಸ್ ಗೀಜರ್ ನಿಂದ ದುರಂತ ಸಂಭವಿಸಿದ್ದು, ವಿಷಾನೀಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಚಿಕ್ಕಜಾಲಲದ ತರಬನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ಗುಂಡ್ಲುಪೇಟೆಯ ಚಂದ್ರಶೇಖರ್ ಹಾಗೂ ಬೆಳಗವೈ ಜಿಲ್ಲೆ ಗೀಕಾಕ್ ಮೂಲದ ಸುಧಾರಾಣಿ ಮೃತರು.

Home add -Advt

ಇಬ್ಬರೂ ಬೆಂಗಳೂರಿನ ಗಾಲ್ಫ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ವಿವಾಹವಾಗಬೇಕು ಎಂದು ನಿರ್ಧರಿಸಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇಬ್ಬರೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಗ್ಯಾಸ್ ಗೀಜರ್ ನಿಂದ ವಿಷಾನೀಲ ಸೋರಿಕೆಯಾಗಿದ್ದು, ಸ್ನಾನದ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿರುವ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜೂನ್ 10ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರನೆಯದಿನ ಮನೆ ಮಾಲೀಕ ಮನೆ ಪರೀಶೀಲನೆ ವೇಳೆ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೆಲದಿನಗಳಲ್ಲೇ ಹಸೆಮಣೆಯೇರಬೇಕಿದ್ದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ.

ಚಿಕ್ಕಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button