Latest

11 ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 40,425 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,18,043ಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಮಹಾಮಾರಿಗೆ 681 ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 27,497ಕ್ಕೆ ಏರಿಕೆಯಾಗಿದೆ.

Home add -Advt

ಈವರೆಗೆ ಕೊರೋನಾ ಸೋಂಕಿನಿಂದ ಗುಣ ಆದವರು 7,00,087 ಜನ ಮಾತ್ರ. ದೇಶದಲ್ಲಿ ಇನ್ನೂ 3,90,459 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

Related Articles

Back to top button