Belagavi NewsBelgaum NewsKannada NewsKarnataka NewsLatest

*ಘಟಪ್ರಭಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರರು; ಓರ್ವನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಇಬ್ಬರು ಬೈಕ್ ಸವಾರರಲ್ಲಿ ಓರ್ವರ ಶವ ಪತ್ತೆಯಾಗಿದೆ.

ನದಿ ದಾಟುವಾಗ ಬೈಕ್ ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ಬಿದ್ದಿದ್ದ ಇಬ್ಬರು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಎಸ್ ಡಿ ಆರ್ ಎಫ್ ತಂಡ ನೀರುಪಾಲಾದವರಿಗಾಗಿ ನಿನ್ನೆಯಿಂದ ಶೋಧ ನಡೆಸಿತ್ತು. ಇಂದು ಚನ್ನಪ್ಪ ಹರಿಜನ(32) ಅವರ ಶವ ಪತ್ತೆಯಾಗಿದೆ.

Home add -Advt

ದುರ್ಗಮ್ಮ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಿಂದ ಮಹಾಲಿಂಗಪುರಕ್ಕೆ ಕೆಲಸದ ನಿಮಿತ್ತ ತೆರಳುವಾಗ ಚೆನ್ನಪ್ಪ ಹಾಗೂ ದುರ್ಗಮ್ಮ ಇಬ್ಬರೂ ಬೈಕ್ ಸಮೇತ ನದಿಗೆ ಬಿದ್ದಿದ್ದರು.


Related Articles

Back to top button