ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ವಂಚಿಸಿದ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರುಣ್ ಕುಗ್ವೆ ಬಂಧಿತ ಆರೋಪಿ. ಅರುಣ್ ಕುಗ್ವೆ ನಾಲ್ಕು ವರ್ಷಗಳಿಂದ ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ಹೇಳಿ ನಂಬಿಸಿ ಆಕೆಯೊಂದಿಗೆ ಸುತ್ತಾಟ ನಡೆಸಿ, ದೈಹಿಕ ಸಂಪರ್ಕವನ್ನೂ ಹೊಂದಿ ಈಗ ಮೋಸ ಮಾಡಿ ಬೇರೊಬ್ಬ ಯುವತಿಯೊಂದಿಗೆ ಇದೇ ರೀತಿ ವರ್ತಿಸುತ್ತಿರುವುದಾಗಿ ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಅರುಣ್ ಕುಗ್ವೆ ತನನ್ನು ಮದುವೆಯಾಗುವುದಾಗಿ ನಂಬಿಸಿ, ಶಿವಮೊಗ್ಗ, ಜೋಗ ಸೇರಿದಂತೆ ಹಲವೆಡೆ ನನ್ನೊಂದಿಗೆ ಓಡಾಡಿದ್ದಾನೆ. ಬಳಿಕ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ, ಫೋಟೋ, ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಈಗ ಮದುವೆಯಾಗದೇ ಬೇರೊಂದು ಯುವತಿ ಜೊತೆ ಓಡಾಡುತ್ತಿದ್ದು ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗೆ ಬೇರೊಂದು ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದು, ಇದನ್ನು ಕೇಳಿದ್ದಕ್ಕೆ ಅರುಣ್ ಕುಗ್ವೆ ಹಾಗೂ ಆತನ ಸಹೋದರ ಗಣೇಶ್, ನನಗೂ ಹಾಗೂ ನನ್ನ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354, 376, 506 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಗರದ ಅರುಣ್ ಕುಗ್ವೆ ಮನೆಗೆ ತೆರಳಿ ಆತನನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ