*ಆಡುಗಳ ಕಳ್ಳತನ: 10 ಪ್ರಕರಣದಲ್ಲಿ ಬೇಕಾಗಿದ್ದ 6 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಡುಗಳು ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಕಟಕೋಳ ಪೊಲೀಸರಿಂದ ಬಂಧಿಸಲಾಗಿದೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಅಜ್ಜಪ್ಪ ನಾನಿಂಗಪ್ಪ ಗುಡೆನ್ನವರ, ಫುರ್ಖಾನ ರಮಜಾನ ಮುಲ್ಲಾ, ಹಣಮಂತ ದುರ್ಗಪ್ಪ ಭಜಂತ್ರಿ, ರಘು ಜಯವಂತ ಕಾರೆಪ್ಪನವರ, ವಿಶಾಲ ಅಶೋಕ ಯಡೂರ ಮತ್ತು ಅಲ್ತಾಪ ಮಾಬುಸಾಬ ನಧಾಪ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳ ವಿರುದ್ಧ ಕಟಕೋಳ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು, ಮುರಗೋಡ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು, ಕುಲಗೋಡ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬಾಗಲಕೋಟ ಜಿಲ್ಲೆಯ ಬಿಳಗಿ ಪೊಲೀಸ್ ಠಾಣೆಯ 2 ಪ್ರಕರಣಗಳನ್ನು ಮತ್ತು ಕೆರೂರ ಪೊಲೀಸ್ ಠಾಣೆಯ 01 ಪ್ರಕರಣ ಹೀಗೆ ಒಟ್ಟು 10 ಪ್ರಕರಣಗಳನ್ನು ಬೇದಿಸಿ ಕಳ್ಳತನಕ್ಕೆ ಸಂಬಂಧಿಸಿದಂತೆ,
ಈ ವೇಳೆ ನಗದು ಹಣ 1,00,100 ರೂ., 6, 10,000 ಮೌಲ್ಯದ ಎರಡು ಕಾರು, 35,000 ಮೌಲ್ಯದ ಎರಡು ಬೈಕ್ ಜಪ್ತಿ ಮಾಡಲಾಗಿದೆ.
ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ದಸ್ತಗೀರ ಮಾಡಿದ ತಂಡದಲ್ಲಿದ್ದ ಪ್ರತಿಯೊಬ್ಬ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಬೆಳಗಾವಿ ಎಸ್ ಪಿ ಕೆ ರಾಮರಾಜ ಪ್ರಶಂಸಣೆ ಮಾಡಿ ಶ್ಲಾಘಿಸಿದ್ದಾರೆ.


