Belagavi NewsBelgaum NewsKarnataka NewsNationalPoliticsTravel

*ಪ್ರಧಾನಿಯಿಂದ ನಾಳೆ ಉದ್ಘಾಟನೆ ಆಗಲಿದೆ ಗೋಕಾಕ ರೈಲು ನಿಲ್ದಾಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲು ನಿಲ್ದಾಣವನ್ನು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳಿಂದ ನವೀಕೃತಗೊಳಿಸಲಾಗಿದ್ದು, ಇದೇ ದಿನಾಂಕ 22 ರಂದು ಮುಂಜಾನೆ 11  ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವುಲ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಗೋಕಾಕ್ ರೋಡ್ ನಿಲ್ದಾಣ 17 ಕೋಟಿ ರೂ. ವೆಚ್ಚದಲ್ಲಿ  ಜಾಗತಿಕ ಮಟ್ಟದ ಸೌಲಭ್ಯಗಳ ಮೂಲಕ ನವೀಕೃತಗೊಂಡು ವಿಶೇಷ ಗಮನ ಸೆಳೆಯುತ್ತಿದೆ.  

Home add -Advt

ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕಣವಾಡಿ ಮಾತನಾಡಿ, ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ನೈರುತ್ಯ ರೈಲ್ವೆ ವಿಭಾಗದಲ್ಲಿ 53 ನಿಲ್ದಾಣಗಳು ಬರುತ್ತವೆ. ಮೊದಲ ಹಂತವಾಗಿ 5 ನಿಲ್ದಾಣಗಳು ಲೋಕಾರ್ಪಣೆಗೆ ಸಿದ್ಧವಾಗಿದ್ದು, ಈ ಪೈಕಿ ಗೋಕಾಕ್ ರೋಡ್ ನಿಲ್ದಾಣವನ್ನು ಕೂಡ ನಾಳೆ ಗುರುವಾರ ಪ್ರಧಾನಿ ಮೋದಿಯವರು ಜನರ ಸೇವೆಗೆ ಉದ್ಘಾಟಿಸಲಿದ್ದಾರೆ. ಸ್ಥಳೀಯ ಕಲೆ, ವಾಸ್ತುಶಿಲ್ಪದ ಆಧಾರದ ಮೇಲೆ ನವೀಕರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ ಎಂದು ವಿವರಿಸಿದರ

ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಮಾತನಾಡಿ, ಪ್ರವಾಸೋಧ್ಯಮ, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸೇರಿ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಗೋಕಾಕ್ ತಾಲ್ಲೂಕು ಹೊಂದಿದೆ. ಹಾಗಾಗಿ, ನವೀಕೃತ ರೈಲು ನಿಲ್ದಾಣದಿಂದ ರೈತರಿಗೆ, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಅದೇ ರೀತಿ ಎಲ್ಲಾ ರೈಲುಗಳು ಇಲ್ಲಿ ನಿಲುಗಡೆ ಆಗಬೇಕು ಎಂದರು.

Related Articles

Back to top button