Belagavi NewsBelgaum NewsKannada NewsPolitics

*ಗೋಕುಲ್ ಮಿಲ್ಕ್ ಪ್ಲ್ಯಾಂಟ್ ಗೆ ಚನ್ನರಾಜ ಹಟ್ಟಿಹೊಳಿ ಭೇಟಿ*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಶನಿವಾರ ಕೊಲ್ಲಾಪುರದ ತಾರಾಬಾಯಿ ಪಾರ್ಕ್ ನಲ್ಲಿರುವ ಪ್ರಸಿದ್ಧ ‘ಗೋಕುಲ್’ ಹಾಲಿನ ಘಟಕದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

ಗೋಕುಲ್ ಪ್ಲಾಂಟ್ ನ ಇತಿಹಾಸ ಹಾಗೂ ಅದರ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು.

ಇದೇ ವೇಳೆ, ದಿವಂಗತ ಆನಂದರಾವ್ ಪಾಟೀಲ ಅವರು ಗೋಕುಲ್ ಮಿಲ್ಕ್ ಪ್ಲಾಂಟಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ಗೋಕುಲ್ ಮಿಲ್ಕ್ ಪ್ಲಾಂಟ್ ನ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರಾದ ವಿಶ್ವಾಸ್ ಪಾಟೀಲ, ನಿರ್ದೇಶಕರುಗಳಾದ ಶಶಿಕಾಂತ ಪಾಟೀಲ (ಚುಯೇಕರ್), ಬಾಳಾಸಾಹೇಬ್ ಖಾಡೆ, ಆರ್‌.ಕೆ.ಮೋರೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button