Belagavi NewsBelgaum NewsKannada News

ಜೊಲ್ಲೆ ಎಜುಕೇಶನ್ ಸೊಸೈಟಿ ವಿದ್ಯಾರ್ಥಿಗೆ ಪದಕ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಆಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ವಿಶೇಷ ಒಲಂಪಿಕ್ಸ್ ಭಾರತ ಕರ್ನಾಟಕ ಇದರ ರಾಷ್ಟ್ರೀಯ ಮಟ್ಟದ ಕ್ರೀಡಾ ಚಾಂಪಿಯನ್ ಸ್ಪರ್ಧೆಯ ಬ್ಯಾಡಮಿಂಟನ್ ಸ್ಪರ್ಧೆಯಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿ ಮಾರುತಿ ಸುನೀಲ ಮಧಾಳೆ  ಅವರು ಭಾಗವಹಿಸಿ ಬೆಳ್ಳಿ ಪದಕ ಗಿಟ್ಟಿಸಿಕೊಂಡು ಜೊಲ್ಲೆ ಗ್ರೂಪ್  ಸಂಸ್ಥೆಗೆ ಕೀರ್ತಿಯನ್ನು ಹೆಚ್ಚಿಸಿದಕ್ಕೆ ಅವರನ್ನು ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಯವರು ಸತ್ಕರಿಸಿ, ಅಭಿನಂದಿಸಿ ಶುಭ ಹಾರೈಸಿದರು.

ಮಾರುತಿ ಮಧಾಲೆ ಅವರ ಸಾಧನೆಗೆ ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿಶೇಷ ಒಲಂಪಿಕ್ಸ್ ಭಾರತ ಕರ್ನಾಟಕ ಇದರ ರಾಜ್ಯ ಅಧ್ಯಕ್ಷರಾದ ಶಶಿಕಲಾ ಜೊಲ್ಲೆ ಅವರು ಅಭಿನಂದಿಸಿದ್ದಾರೆ.

Home add -Advt

ಜೊಲ್ಲೆ ಗ್ರೂಪ್ ಈವೆಂಟ್ ಮ್ಯಾನೇಜರ್ ವಿಜಯ ರಾವುತ್ ಶಿಕ್ಷಕ ರಾಜು ಹಿರೇಮಠ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button