Latest

ಮತ್ತಷ್ಟು ಏರಿಕೆಯಾಯ್ತು ಚಿನ್ನ-ಬೆಳ್ಳಿ ದರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೆ ಶಾಕ್. ಚಿನ್ನ ಬೆಳ್ಳಿ ದರದಲ್ಲಿ ಇಂದು ಕೂಡ ಏರಿಕೆಯಾಗಿದೆ. ದೇಶದಲ್ಲಿ ಬೆಳ್ಳಿ ದರದಲ್ಲಿ ಭಾರಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ 1500 ರೂಪಾಯಿ ಏರಿಕೆಯಾಗಿದೆ.

ಇಂದು ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,590 ರೂ ಆಗಿದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Home add -Advt

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 52,590 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,540 ರೂ. ಮುಂಬೈ- 48,200 ರೂ, ದೆಹಲಿ- 48,200 ರೂ, ಕೊಲ್ಕತ್ತಾ- 48,200 ರೂ, ಹೈದರಾಬಾದ್- 48,200 ರೂ, ಪುಣೆ- 48,300 ರೂ,

24 ಕ್ಯಾರೆಟ್ ಚಿನ್ನ ಚೆನ್ನೈ- 52,960 ರೂ, ಮುಂಬೈ- 52,590 ರೂ, ದೆಹಲಿ- 52,590 ರೂ, ಕೊಲ್ಕತ್ತಾ- 52,590 ರೂ, ಹೈದರಾಬಾದ್- 52,590 ರೂ, ಪುಣೆ- 52,690 ರೂ, ಮೈಸೂರು- 52,590 ರೂ. ಇದೆ.

ಇಂದು ದೇಶದಲ್ಲಿ ಬೆಳ್ಳಿ ದರದಲ್ಲಿಯೂ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ದರ 73,800 ರೂ, ಚೆನ್ನೈ 72,800 ರೂ ನಿಗದಿಯಾಗಿದೆ.

 

Related Articles

Back to top button