Kannada NewsLatest

ಉತ್ತಮ ಸಂಸ್ಕಾರವೆ, ಧರ್ಮ ಪ್ರಚಾರದ ಧ್ಯೇಯ

ಉತ್ತಮ ಸಂಸ್ಕಾರವೆ, ಧರ್ಮ ಪ್ರಚಾರದ ಧ್ಯೇಯ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಯಲೆಂದೇ ಧರ್ಮ ಪ್ರಚಾರವನ್ನು ಕೇವಲ ಸನ್ಯಾಸಿಗಳು ಮಾತ್ರವಲ್ಲದೆ, ಪ್ರತೀ ಒಬ್ಬರು ಮಾಡುವುದರಿಂದ ಈಗಿನ ಸಾಮಾಜಿಕ ಅನಾಹುತಗಳ ವಿರುದ್ಧ ಜಾಗೃತಿ ಉಂಟಾಗಲಿದೆ. ಈ ದೃಷ್ಠಿಯಿಂದ ಸತತವಾದ ಪ್ರಯತ್ನಗಳು ಅತ್ಯಗತ್ಯವಾಗಿವೆ.

ಪವಿತ್ರ ಮಾಸಾಚರಣೆಯ ಭಾಗವಾಗಿ ‘ಮನ ಮನೆಗಳಲ್ಲಿ ವಿಶ್ವಗುರು ಬಸವ ಜ್ಯೋತಿ’ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಪ್ರತಿಸ್ಥಾಪಿಸಿ, ಬೆಳೆಸಲು ಸಹಕಾರಿಯಾಗಲಿವೆ. ಈ ಯಾತ್ರೆಯು ಸತತವಾಗಿ 16ನೇ ವರ್ಷಕ್ಕೆ ಪಾದಾರ್ಪಣ ಮಾಡುವ ಸಂದರ್ಭದಲ್ಲಿ, ಅಭಿನಂದಿಸಿ ಈ ಜ್ಯೋತಿ ಯಾತ್ರೆಯಿಂದ ವಿಶೇಷವಾಗಿ ಯುವಕರು ಪಾಲ್ಗೊಳ್ಳುತ್ತಿರುವುದು ಸಂತೋಷವಾದ ವಿಚಾರ. ಶರಣರ ಜೀವನ ತೆರದ ಪುಸ್ತಕದಂತೆ.

ಯಾವುದೇ ಜಾತಿ ಭೇದವಾಗಲಿ, ಸ್ತ್ರೀ ಪುರುಷ ಅಸಮಾನತೆ ಆಗಲಿ, ಸನ್ಯಾಸಿ ಸಂಸಾರಿ ಎನ್ನುವ ಆಶ್ರಮ ಭೇದವನ್ನಾಗಲಿ ಮಾಡದೆ ಎಲ್ಲರನ್ನು ಇಂಬಿಟ್ಟುಕೊಂಡ ಜೀವನ ಪದ್ಧತಿಯನ್ನು ಪ್ರಚುರಪಡಿಸುವುದೇ ಈ ಜ್ಯೋತಿ ಯಾತ್ರೆಯ ಧ್ಯೇಯ.Good burial is the mission of religion 1

ಬೆಳಗಾವಿಯ ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿ, ಜಿಲ್ಲಾ ಲಿಂಗಾಯತ ದರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆಗಳ ಸಹಯೋಗದಲ್ಲಿ ಗುರುವಾರ, ತಾ.01.08.2019 ರಂದು “ವಿಶ್ವಗುರು ಬಸವ ಮಂಟಪ”ದಲ್ಲಿ ವಿಶ್ವಗುರು ಬಸವ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ.
ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳು , ಸಂಚಾಲಕರು, ವಿಶ್ವಗುರು ಬಸವ ಮಂಟಪ, ಬೆಳಗಾವಿ ಇವರು ದಿವ್ಯ ಸಾನಿಧ್ಯವನ್ನು ವಹಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಶೀರ್ವಚನದ ಮೂಲಕ ನೀಡಿದರು.

ಅತಿಥಿಯಾಗಿ ಜಯನಗರದ ಹಿರಿಯ ಶರಣ ಗುರಪ್ಪ ಮಾಳಗಿಯವರು ‘ಬಸವ ಜ್ಯೋತಿ’ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಶರಣ ಸಂಗಪ್ಪ ಪಲ್ಲೇದರು ಅಧ್ಯಕ್ಷತೆಯನ್ನು ವಹಿಸಿ, ಬಸವ ಧ್ವಜಾರೋಹಣಗೈದು ಸಂದೇಶ ನೀಡಿದರು.

ಪ್ರಾರಂಭದಲ್ಲಿ “ಬಸವ ಪೂಜೆ”ಯನ್ನು ಕ್ರಾಂತಿ ಗೊಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾಗಣದ ಸದಸ್ಯರು ನೆರವೇರಿಸಿದರು. ಸ್ವಾಗತವನ್ನು ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಶರಣ ಮಾರಯ್ಯ ಗಡಗಲಿ ಕೋರಿದರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶರಣ ಕೆ. ಬಸವರಾಜ ನಿರೂಪಿಸಿದರು. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button