ಪ್ರಗತಿವಾಹಿನಿ ಬೆಂಗಳೂರು: ತಮ್ಮನ್ನು ಒತ್ತೆಯಾಳಾಗಿರಿಸಿಕೊಂಡು ಯುವತಿಯೊಬ್ಬಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಿರುವುದಾಗಿ ಬೆಂಗಳೂರಿನ ಗೂಗಲ್ ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ವ್ಯಕ್ತಿಯೊಬ್ಬರು ದೂರಿದ್ದಾರೆ.
ಗಣೇಶ ಶಂಕರ್ ಎಂಬುವವರು ದೂರುದಾರರು. ಇವರು ಶಿಲ್ಲಾಂಗ್ ನಲ್ಲಿ ಎಂಬಿಎ ಓದುವಾಗ ಮಧ್ಯಪ್ರದೇಶದ ಭೋಪಾಲ್ ನ ಸುಜಾತಾ ಎಂಬ ಯುವತಿಯ ಸಂಪರ್ಕವಾಗಿತ್ತು.
ಸುಜಾತಾಳ ತಂದೆ ಕಮಲೇಶ್ ಸಿಂಗ್, ಆಕೆಯ ಸಹೋದರ ಶೈವೇಶ್ ಸಿಂಗ್ ಹಾಗೂ ಆಕೆಯ ಭಾವ ವಿಜೇಂದ್ರ ಕುಮಾರ್ ತಮ್ಮನ್ನು ಭೋಪಾಲ್ ನಲ್ಲಿ ಒತ್ತೆಯಾಳಾಗಿರಿಸಿಕೊಂಡು ಬಲವಂತದಿಂದ ಸುಜಾತಾಳ ಜತೆ ಮದುವೆ ಮಾಡಿಸಿದ್ದಾರೆ ಎಂದು ಗಣೇಶ ಶಂಕರ್ ದೂರಿದ್ದಾರೆ.
ತಮಗೆ ಮಾದಕ ವಸ್ತುಗಳನ್ನು ಬಲವಂತದಿಂದ ನೀಡಲಾಯಿತು. ಮದುವೆ ಸಂದರ್ಭದ ಫೋಟೊಗಳನ್ನು ಸಹ ಕ್ಲಿಕ್ಕಿಸಿಕೊಂಡು 40 ಲಕ್ಷ ರೂ. ನೀಡುವಂತೆ ಯುವತಿ ಕುಟುಂಬದವರು ಬೆದರಿಕೆಯೊಡ್ಡಿದ್ದರು. ಹಣ ನೀಡದಿದ್ದರೆ ಸುಳ್ಳು ಕೇಸುಗಳನ್ನು ದಾಖಲಿಸಿ ಸಿಲುಕಿಸುವುದಾಗಿ ಧಮಕಿ ಹಾಕಿದರು ಎಂದು ಸಹ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಭೊಪಾಲ್ ನ ಕಮಲಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ