
ಪ್ರಗತಿವಾಹಿನಿ ಸುದ್ದಿ: ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ನೌಕರರು ನಾಳೆಯಿಂದ ಅನಿರ್ದಾಷ್ಟವಧಿಗೆ ಮುಷ್ಕರ ಆರಂಭಿಸಲಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಯಾವುದೇ ಸಮಸ್ಯೆ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸರ್ಕಾರ ಸಮರ್ಥವಾಗಿದೆ. ಸಿಎಂ ಜೊತೆ ನಡೆಯುವ ಮಾತುಕತೆ ವಿಫಲಗೊಂಡರೆ ಮುಷ್ಕರ ಶುರುವಾಗೋದು ನಿಶ್ಚಿತ, ಹಾಗಾಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಅಂತ ಕೇಳಿದರೆ ಎಲ್ಲ ಕಡೆಯೂ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಹೇಳಿದರು.
ನಾಲ್ಕೂ ನಿಗಮಗಳ ನೌಕರರು ಇಂದಿನಿಂದ ಪ್ರತಿಭಟನೆಯಲ್ಲಿ ಭಾಗಿ ಆಗುತ್ತಾರೆ. ಯಾವುದೇ ಬಸ್ ಸಂಚಾರ ವ್ಯತ್ಯಯ ಆಗಲ್ಲ. ರಜೆ ಇರುವ ನೌಕರರು, ವೀಕ್ ಆಫ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಕಳೆದ 4 ವರ್ಷಗಳಿಂದ ವೇತನ ಹೆಚ್ಚಳದಲ್ಲಿ ತಾರತಮ್ಯ ಆಗ್ತಿದೆ. ಸರ್ಕಾರ ಬಂದು ಎರಡು ವರ್ಷ ಕಳೆದಿದ್ರೂ ನಮ್ಮಬೇಡಿಕೆ ಈಡೇರಿಸಿಲ್ವ ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.