Kannada NewsNationalPolitics

*ಭಾರತೀಯ ವಾಯುಪಡೆಗೆ 114 ರಫೇಲ್ ವಿಮಾನಗಳನ್ನು ಖರೀದಿಸಲು ಮುಂದಾದ ಸರ್ಕಾರ* 

ಪ್ರಗತಿವಾಹಿನಿ ಸುದ್ದಿ: ಭಾರತೀಯ ವಾಯುಪಡೆಗೆ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಇದರಿಂದ ಭಾರತೀಯ ಸೇನೆಗೆ ಮತ್ತಷ್ಟು ಬಲ ಸಿಗಲಿದೆ.

ಈ ಸಂಬಂಧ ಭಾರತ ಸಲ್ಲಿಸಿರುವ ಮನವಿ ಪತ್ರಕ್ಕೆ ಫ್ರಾನ್ಸ್ ಆಗಸ್ಟ್ ಮಧ್ಯಭಾಗದ ವೇಳೆಗೆ ತನ್ನ ಅಧಿಕೃತ ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ. ಫ್ರಾನ್ಸ್‌ನಿಂದ ಪ್ರತ್ಯುತ್ತರ ಬಂದ ತಕ್ಷಣವೇ ಉಭಯ ದೇಶಗಳ ನಡುವೆ ವಿಮಾನಗಳ ಬೆಲೆ ನಿರ್ಧಾರ ಮತ್ತು ಒಪ್ಪಂದದ ಇತರ ಪ್ರಮುಖ ಷರತ್ತುಗಳ ಕುರಿತು ದ್ವಿಪಕ್ಷೀಯ ಮಾತುಕತೆಗಳು ಅಧಿಕೃತವಾಗಿ ಆರಂಭವಾಗಲಿವೆ.

ಭಾರತವು ಈ ಬೃಹತ್ ಸರ್ಕಾರಿ ಒಪ್ಪಂದಕ್ಕಾಗಿ ಕಳೆದ ಮೇ ತಿಂಗಳಿನಲ್ಲಿಯೇ ಫ್ರಾನ್ಸ್‌ಗೆ ಮನವಿ ಪತ್ರವನ್ನು ರವಾನಿಸಿತ್ತು. ಪ್ರಸ್ತುತ ಫ್ರಾನ್ಸ್ ಸರ್ಕಾರ ಈ ಮನವಿಯನ್ನು ಪರಿಶೀಲಿಸುತ್ತಿದ್ದು ಮುಂದಿನ ತಿಂಗಳ ವೇಳೆಗೆ ತನ್ನ ಸಮ್ಮತಿ ಹಾಗೂ ವಿವರಗಳನ್ನು ಹಂಚಿಕೊಳ್ಳಲಿದೆ. ಈ ಒಪ್ಪಂದದ ಅತ್ಯಂತ ಪ್ರಮುಖ ಅಂಶವೆಂದರೆ ‘ಮೇಕ್ ಇನ್ ಇಂಡಿಯಾ’ ಯೋಜನೆ. ಒಟ್ಟು 115 ವಿಮಾನಗಳ ಪೈಕಿ 95 ಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನ ದಷ್ಟೋ ಏವಿಯೇಷನ್ ಕಂಪನಿಯು ಭಾರತೀಯ ಸಂಸ್ಥೆಯೊಂದರ ಸಹಯೋಗದೊಂದಿಗೆ ಭಾರತದಲ್ಲೇ ತಯಾರಿಸಲಿದೆ.

ಭಾರತೀಯ ವಾಯುಪಡೆಗೆ ಈ ಯುದ್ಧ ವಿಮಾನಗಳ ಸೇರ್ಪಡೆ ಅತ್ಯಂತ ಅಗತ್ಯವಾಗಿದೆ. ಹಳೆಯ ಮಾದರಿಯ ಮಿಗ್ ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ಸೇವೆಯಿಂದ ಹಿಂಪಡೆಯುತ್ತಿರುವುದು ಮತ್ತು ಸ್ವದೇಶಿ ನಿರ್ಮಿತ ಎಲ್‌ಸಿಎ ಮಾರ್ಕ್ 1ಎ ಹಾಗೂ ಮಾರ್ಕ್ 2 ವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ವಾಯುಪಡೆಯ ಸ್ಕಾಡ್ರನ್‌ಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ.

ಈ ಕೊರತೆಯನ್ನು ನೀಗಿಸಲು ರಫೇಲ್ ವಿಮಾನಗಳು ಪ್ರಮುಖ ಪಾತ್ರ ವಹಿಸಲಿವೆ. ರಕ್ಷಣಾ ಸಚಿವಾಲಯವು ವಾಯುಪಡೆಯ ಸಾಮರ್ಥ್ಯ ಹೆಚ್ಚಿಸಲು ನಡೆಸಿದ ಕೂಲಂಕುಷ ಅಧ್ಯಯನದ ನಂತರ, ರಕ್ಷಣಾ ಸ್ವಾಧೀನ ಮಂಡಳಿಯು  ಈ 114 ರಫೇಲ್ ವಿಮಾನಗಳ ಖರೀದಿಗೆ ಈಗಾಗಲೇ ಅನುಮೋದನೆ ನೀಡಿದೆ.

ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳು ಈಗಾಗಲೇ ಒಟ್ಟು 62 ರಫೇಲ್ ವಿಮಾನಗಳು ಇದ್ದು, ಒಟ್ಟು ಸಂಖ್ಯೆ 200 ರ ಗಡಿ ದಾಟುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button