
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾರ್ಚ್ 24: ಪ್ರತಿ ಗ್ರಾಮ ಪಂಚಾಯಿತಿಗಳ ವಿವೇಚನೆಗೆ ಆಸ್ತಿ ನಿರ್ವಹಣೆ ಮಾಡುವ ಸಲುವಾಗಿ ದುಪ್ಪಟ್ಟು ಅನುದಾನ ನೀಡಿ ಇದಕ್ಕಾಗಿ ಎರಡು ಸಾವಿರ ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ರಾಜಕೀಯ ವಿಕೇಂದ್ರಿಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣವನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿಸಿರುವ 2019-2020, 2020-2021 ಹಾಗೂ 2021-2022ನೇ ಸಾಲಿನ “ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ – 2023 ಹಾಗೂ ಪಂಚತಂತ್ರ 2.0 ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ತೆರಿಗೆ ಸಂಗ್ರಹದ PoS ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಅಭಿಯಾನಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಿಗೆ ಶಕ್ತಿ
ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರಿದ್ದಲ್ಲಿ ಆಡಳಿತ, ಅಭಿವೃದ್ಧಿ ಯಾಗಬೇಕು. ಬಾಪೂಜಿ ಕೇಂದ್ರದ ತಂತ್ರಾಂಶಗಳ ಮೂಲಕ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಲು ಬಾಪೂಜಿ 02 ಯಿಂದ ಅನುಕೂಲ ಲವಾಗಲಿದೆ. ಇದರ ಜೊತೆಗೆ ಸೇವಾ ಭತ್ಯೆಗಳನ್ನು ಒಂದು ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಧ್ಯಕ್ಷರಿಗೆ ಆರು ಸಾವಿರ ದೊರೆಯುವಂತೆ ಮಾಡಲಾಗಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಹಳಷ್ಟು ಮಹತ್ವ ನೀಡಿದೆ. ಬರುವ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಜನರಿಗೆ ಅತ್ಯಂತ ಹತ್ತಿರವಿರುವ ಸರ್ಕಾರ ಗ್ರಾಮ ಪಂಚಾಯಿತಿಯನ್ನು ಬಲಪಡಿಸಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ.
ಗ್ರಾಮೀಣಾಭಿವೃದ್ಧಿ ಈ ದೇಶದ ಸಮಗ್ರ ಅಭಿವೃದ್ಧಿಯ ಮೂಲ. ಅಬ್ದುಲ್ ನಜೀರ್ ಸಾಬ್ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಯ ಹರಿಕಾರರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವರ ನೇತೃತ್ವದಲ್ಲಿ ಪ್ರಾರಂಭವಾಗಿ ನಮ್ಮ್ದೆ ಕಾನೂನು ರೂಪಿಸಲಾಯಿತು. 73 ನೇ ತಿದ್ದುಪಡಿ ತಂದು ದೇಶವ್ಯಾಪಿ ಕರ್ನಾಟಕದ ಮಾದರಿ ಅನುಷ್ಠಾನವಾಗಿದೆ. ಮೂರು ಹಂತದ ಪಂಚಾಯತ್ ವ್ಯವಸ್ಥೆ ಯಶಸ್ವಿಯಾಗಲು ಆರ್ಥಿಕ ಅಧಿಕಾರ ನೀಡಬೇಕೆಂಬ ಬೇಡಿಕೆ ಇತ್ತು ಎಂದರು.
ದೇಶದಲ್ಲಿಯೇ ನಂಬರ್ ಒನ್
ನರೇಗಾದಲ್ಲಿ ಕರ್ನಾಟಕದ ಪಂಚಾಯತ್ ರಾಜ್ ಇಲಾಖೆ ಅತ್ಯುತ್ತಮ ಕೆಲಸ ಮಾಡಿದ್ದು ದೇಶದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ. ನಿಗದಿಯಾದ ಗುರಿ ಮೀರಿ ಸಾಧನೆ ಮಾಡಿ ಹೆಚ್ಚುವರಿ ಅನುದಾನವನ್ನು ರಾಜ್ಯ ನಿರಂತರವಾಗಿ ಪಡೆದಿದೆ ಎಂದರು.
ಬದಲಾವಣೆಯ ನಿರೀಕ್ಷೆ
ನರೇಗಾದಿಂದ ಸಾಕಷ್ಟು ಆಸ್ತಿ ನಿರ್ಮಾಣವಾಗಿದೆ. ಸಾಕಷ್ಟು ಜನರಿಗೆ ಕೆಲಸ ದೊರೆತಿದೆ. ಇದನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕಾನೂನಿನಲ್ಲಿ ಕೆಲವು ಬದಲಾವಣೆ ತರಬೇಕಾಗಿತ್ತದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಸಾಲೆ, ಆಸ್ಪತ್ರೆಗಳಿಗೆ ನರೇಗಾ ಬಳಕೆ ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಬಳಿ ಮಾತನಾಡಿದ್ದು, ಶೀಘ್ರ ದಲ್ಲಿಯೇ ಬದಲಾವಣೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.
ದುಪ್ಪಟ್ಟು ಅನುದಾನ
ಈ ವರ್ಷದ ಬಜೆಟ್ ನಲ್ಲಿ ಎ. ಬಿ.ಸಿ ಪಂಚಾಯಿತಿಗಳಿಗೆ ದುಪ್ಪಟ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ