Belagavi NewsBelgaum NewsKannada NewsKarnataka News
*ಬಾಲಕನನ್ನು ಬಾರ್ ಗೆ ಕರೆದೂಯ್ದು ಎಣ್ಣೆ ಕುಡಿಸಿದ ಅಜ್ಜ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಪ್ರೀತಮ್ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಪುಟ್ಟ ಬಾಲಕನಿಗೆ ಮದ್ಯ ಕುಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮುದ್ದಾದ ಬಾಲಕನನ್ನು ಅಜ್ಜನೊಬ್ಬ ಬಾರ್ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅಜ್ಜನೊಂದಿಗೆ ಬಾಲಕನಿಗೂ ಮದ್ಯಪಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಬಾಲಕನಿಗೆ ಮದ್ಯ ನೀಡಿದ ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಸಿಬ್ಬಂದಿಗಳ ವರ್ತನೆಗೆ ಆಕ್ಷೇಪ ಕೇಳಿಬಂದಿವೆ.
ಅಬಕಾರಿ ಹಾಗೂ ಪೊಲೀಸ್ ಇಲಾಖೆಗಳ ನಿರ್ಲಕ್ಷ್ಯದ ಬಗ್ಗೆ ಕೂಡ ಆಕ್ರೋಶ ವ್ಯಕ್ತವಾಗಿದ್ದು, ವಯಸ್ಸಿನ ಮಿತಿ ಮೀರಿ ಮದ್ಯ ಮಾರಾಟ ಮತ್ತು ಸೇವನೆ ನಡೆಯುತ್ತಿರುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.



