Latest

WWE ಖ್ಯಾತಿಯ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು, WWE ಖ್ಯಾತಿಯ ದಿ ಗ್ರೇಟ್ ಖಲಿ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಡಬ್ಲ್ಯುಡಬ್ಲ್ಯು ಎಫ್, ಡಬ್ಲ್ಯುಡಬ್ಲ್ಯುಇ ಪಂದ್ಯಾವಳಿಗಳಲ್ಲಿ ಮಿಂಚಿರುವ ಖಲಿ ಸಾಕಷ್ಟು ಹಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇತ್ತೀಚೆಗೆ ಖಲಿ ಎಎಪಿಯತ್ತ ಮುಖಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ನವದೆಹಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಜಿತೇಂದ್ರ ಪ್ರಸಾದ್ ಸಮ್ಮುಖದಲ್ಲಿ ಖಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ಕುರಿತು ಮಾತನಾಡಿದ ಖಲಿ, ನಾನು ಹಲವು ವರ್ಷಗಳ ಕಾಲ ಅಮೆರಿಕಾದಲ್ಲಿದ್ದೆ. ಪ್ರಧಾನಿ ಮೋದಿ ಕಾರ್ಯ ವೈಖರಿ, ಭಾರತದ ಅಭಿವೃದ್ಧಿ ಕಾರ್ಯಗಳನ್ನು ಕಂಡು ಪ್ರೇರೇಪಿತನಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಹೇಳಿದ್ದಾರೆ.
ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Related Articles

Back to top button