Politics
*ಗೃಹಲಕ್ಷ್ಮೀ ಹಣದಿಂದ ಮಾಂಗಲ್ಯ ಖರೀದಿಸಿದ ಮಹಿಳೆ: ಇದು ಸತ್ಯಕ್ಕೆ ಇರುವ ಶಕ್ತಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ರಾಜ್ಯದಲ್ಲಿ ಹಲವು ಮಹಿಳೆಯರಿಗೆ ಅನುಕೂಲವಾಗಿದ್ದು, ಇದೀಗ ಕೊಪ್ಪಳದಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣದಿಂದ ಮಾಂಗಲ್ಯ ಸರ ಖರೀದಿಸಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಿಜೆಪಿ ಹರಿಬಿಟ್ಟಿದ್ದ ಸುಳ್ಳು ಸುದ್ದಿಗಳು ಇದೀಗ ತಿರುಗುಬಾಣವಾಗಿ ಪರಿಣಮಿಸಿವೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರ ಕಸಿಯುತ್ತಾರೆ” ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಆದರೆ ಕೊಪ್ಪಳದ ಗಂಗಾವತಿಯಲ್ಲಿ ಗ್ಯಾರಂಟಿ ಫಲಾನುಭವಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಉಳಿಸಿ ಮಂಗಳಸೂತ್ರವನ್ನು ಖರೀದಿಸಿದ್ದಾರೆ. ಸತ್ಯಕ್ಕೆ ಗೆಲುವು ಖಚಿತ, ಸುಳ್ಳಿಗೆ ಸೋಲು ನಿಶ್ಚಿತ! ಇದು ಸತ್ಯಕ್ಕೆ ಇರುವ ಶಕ್ತಿ ಎಂದು ಡಿ.ಕೆಶಿವಕುಮಾರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ