
ಪ್ರಗತಿವಾಹಿನಿ ಸುದ್ದಿ: ವಾಹನಗಳು ಚಲಿಸುತ್ತಿದ್ದಾಗಲೇ ಏಕಾಏಕಿ ಸೇತುವೆ ಕುಸಿದು ಬಿದ್ದ ಪರಿಣಾಮ ಎರಡು ವ್ಯಾನ್, ಒಂದು ಕಾರು ನದಿಗೆ ಬಿದ್ದು, 8 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಜರಾತ್ ನ ವಡೋದರಾದಲ್ಲಿ ಈ ದುರಂತ ಸಂಭವಿಸಿದೆ. ಸೇತುವೆ ಕುಸಿದ ಪರಿಣಾಮ ಎರಡು ವ್ಯಾನ್ ಗಳು, ಕಾರು ಮಾಹಿಸಾಗರ್ ನದಿಗೆ ಬಿದ್ದಿದೆ. ಒಂದು ಟ್ಯಾಂಕರ್ ಸೇತುವೆಯಿಂದ ನೇತಾಡಿದೆ.
ದುರಂತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.