
ಪ್ರಗತಿವಾಹಿನಿ ಸುದ್ದಿ; ಗ್ವಾಟೆಮಾಲಾ: ಚಂಡಮಾರುತ ಹಾಗೂ ಭಾರೀ ಮಳೆಯಿಂದಾಗಿ ಭೂಕುಸಿತವುಂಟಾಗಿದ್ದು, 50 ಜನರು ಸಾವನ್ನಪ್ಪಿರುವ ಘಟನೆ ಮಧ್ಯ ಅಮೆರಿಕಾದ ಗ್ವಾಟೆಮಾಲಾದಲ್ಲಿ ನಡೆದಿದೆ.
ಗ್ವಾಟೆಮಾಲಾ ಮಾತ್ರವಲ್ಲ ಹಲವು ಪ್ರದೇಶಗಳಲ್ಲಿ ಭೂ ಕುಸಿತವುಂಟಾಗಿದ್ದು, 25 ಮನೆಗಳು ನೆಲಸಮವಾಗಿದೆ.ಹಲವು ಜನರು ಅವಶೇಷಗಳಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.