Belagavi NewsBelgaum NewsKannada NewsTravel

*ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿದ್ದ ಹೆಣ್ಣು ಸಿಂಹ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಇದ್ದ ಹೆಣ್ಣು ಸಿಂಹ ನಿಧನ ಹೊಂದಿದೆ. 

15 ವರ್ಷದ ನಿರುಪಮಾ ಎಂಬ ಹೆಣ್ಣು ಸಿಂಹವು ಇಂದು ರಂದು ಮಧ್ಯಾಹ್ನ 12:55 ಕ್ಕೆ ವೃದ್ದಾಪ್ಯ ಹಾಗೂ ಬಹು ಅಂಗಾಂಗಗಳ ವೈಫಲ್ಯದಿಂದ ಅಸುನಿಗಿದೆ.  ನಿರುಪಮಾ ಸಿಂಹವನ್ನು ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿರುತ್ತದೆ. ನಂತರ ಕೇಂದ್ರಿಯ ಮೃಗಾಲಯ ಪ್ರಾಧಿಕಾರವು ನಿಗಧಿಪಡಿಸಿದ ಮಾರ್ಗಸೂಚಿಗಳಂತೆ ಮರಣೋತ್ತರ ಪರೀಕ್ಷೆ ಮಾಡಿ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.‌

Home add -Advt

ಸದರಿ ಪ್ರಕ್ರಿಯೆಯಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಮರಿಯ ಕ್ರಿಷ್ಟು ರಾಜಾ, ವಲಯ ಅರಣ್ಯ ಅಧಿಕಾರಿ, ಪವನ ಕುರನಿಂಗ, Multi Specialty Veterinary Hospital ನ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಹಣಮಂತ ಸಣ್ಣಕ್ಕಿ, Regional Research Officer, ಬೆಳಗಾವಿ ತಜ್ಞರಾದ ಡಾ. ಶ್ರೀಕಾಂತ ಕೊಹಳ್ಳಿ, ಮೃಗಾಲಯದ ವೈದ್ಯರಾದ ಡಾ. ನಾಗೇಶ ಹುಯಿಲ್‌ಗೋಳ ಮತ್ತು ಮೃಗಾಲಯದ ಸಿಬ್ಬಂದಿಗಳಿದ್ದರು.

Related Articles

Back to top button