Uncategorized

*ರಾಜಕೀಯ ತುರಿಕೆ ಶುರುವಾಗಿ ಮೈ ಕೈ ಪರಚಿಕೊಳ್ತಿರೋದು ಅವರು…; ಸಚಿವ ದಿನೇಶ್ ಗುಂಡೂರಾವ್ ವಿರುದ್ಧವೂ ಕಿಡಿ ಕಾರಿದ HDK*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸುಮ್ಮನೇ ಮೈ ಕೈ ಪರಚಿಕೊಳ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದರು. ಇದೀಗ ಆರೋಗ್ಯ ಸಚಿವರ ಹೇಳಿಕೆಗೆ ಕಿಡಿ ಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, ತುರಿಕೆ ಶುರುವಾಗಿದ್ದು ಅವರಿಗೆ ಅವರು ಮೈ ಕೈ ಪರಚಿಕೊಳ್ಳಲಿ ಎಂದು ಗುಡುಗಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದಿನೇಶ್ ಗುಂಡೂರಾವ್ ಅವರು ನನಗೆ ಮೈ ಕೈ ಪರಚಿಕೊಳ್ತಿದ್ದಾರೆ ಎಂದು ಹೇಳಿದ್ದಾರೆ. ನಾನ್ಯಾಕೆ ಮೈ ಕೈ ಪರಚಿಕೊಳ್ಳಲಿ? ರಾಜಕೀಯ ತುರಿಕೆ ಶುರುವಾಗಿರುವುದು ಅವರಿಗೆ ಹಾಗಾಗಿ ಅವರು ಮೈ ಕೈ ಪರಚಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

ಜೆಡಿಎಸ್ ನಾಶವಾಗಲಿದೆ ಎಂದೂ ಅವರೂ ಹೇಳಿದ್ದಾರೆ. ಜೆಡಿಎಸ್ ಯಾವತ್ತೂ ನಾಶವಾಗಲ್ಲ, ನಾವು ಸೋತಾಗಲೂ ಒಂದೇ ರೀತಿ ಇದ್ದೇವೆ. ಅಧಿಕಾರದಲ್ಲಿದ್ದಾಗಲು ಒಂದೇ ರೀತಿ ಇದ್ದೇವೆ. ಚುನಾವಣೆಯಲ್ಲಿ ಸೊತಾಗಲೂ ಜನರ ಕಷ್ಟ, ಸುಖ ಕೇಳಿದ್ದೇವೆ ಎಂದು ಹೇಳಿದರು.


Related Articles

Back to top button