Latest

ಸಮುದಾಯಕ್ಕೆ ಹರಡಿದ ಡೆಡ್ಲಿ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಸಮುದಾಯಕ್ಕೆ ಸೋಂಕು ಹರಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರರೊಂದಿಗೆ ಮಾತಾನಾಡಿದ ಅವರು, ಇಂದು ಹಾಸನ ಜಿಲ್ಲೆಯಲ್ಲಿ 28 ಹೊಸ ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಹಾಸನ ತಾಲೂಕಿನ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈತ ಬೆಂಗಳೂರಿನಿಂದ ಬಂದಿದ್ದು, ಉಸಿರಾಟದ ತೊಂದರೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

Home add -Advt

ಇದುವರೆಗೂ ಹಾಸನದಲ್ಲಿ 58 ಕಂಟೋನ್ಮೆಂಟ್ ಜೋನ್ ಇದೆ. ಅದರ ಜೊತೆಗೆ ಇಂದು 13 ಹೊಸ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಇದರಲ್ಲಿ 11 ಕಂಟೋನ್ಮೆಂಟ್ ಜೋನ್‍ಗಳ ನಿಗದಿತ ದಿನ ಈಗಾಗಲೇ ಮುಗಿದಿದೆ. ನಮ್ಮ ನಿಮ್ಮ ಸುತ್ತಮುತ್ತ ಪಾಸಿಟಿವ್ ಇರುವವರು ಇರಬಹುದು ಎಚ್ಚರದಿಂದಿರಿ. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬರುತ್ತಿರುವುದು ಇದಕ್ಕೆ ಉದಾಹರಣೆ ಎಂದರು.

Related Articles

Back to top button