ಪ್ರಗತಿವಾಹಿನಿ ಸುದ್ದಿ; ಹಾವೇರಿ: ಕೋರ್ಟ್ ಶಿರಸ್ತೆದಾರರೊಬ್ಬರು ಸರ್ಕಾರಿ ನೌಕರರ ಭವನದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಭರಗಿ (42) ಆತ್ಮಹತ್ಯೆಗೆ ಶರಣಾದ ಹಾವೇರಿ ಪಟ್ಟಣದ ನ್ಯಾಯಾಲಯದ ಶಿರಸ್ತೆದಾರ. ಮೂಲತ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರ ಗ್ರಾಮದವರಾಗಿದ್ದ ಮಲ್ಲಿಕಾರ್ಜುನ ಹಾವೇರಿ ನ್ಯಾಯಾಲಯದಲ್ಲಿ ಕಳೆದ 13 ವರ್ಷಗಳಿಂದ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹಸೀನಾ ಮೂಲಿಮನಿ ಎಂಬ ಮಹಿಳೆ ಹಾಗೂ ವಕೀಲರಾದ ಜಿ.ವಿ.ಕುಲಕರ್ಣಿ, ಕೆ.ಬಿ.ಕುರಿಯವರು ವಾಸೀಮ್ ಎಂಬ ಆರೋಪಿ ನ್ಯಾಯಾಲಯದಲ್ಲಿ ಮಲ್ಲಿಕಾರ್ಜುನ ಅವರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮಾನಸಿಕ ಕಿರುಕುಳಕ್ಕೆ ಬೇಸತ್ತು ಮಲ್ಲಿಕಾರ್ಜುನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತ್ನಿ ಭಾರತಿ ದೂರು ನೀಡಿದ್ದಾರೆ.
ಸಾವಿಗೂ ಮುನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ನನ್ನ ಸಾವಿಗೆ ಈ ನಾಲ್ವರು ಕಾರಣ. ಅವರಿಗೆ ಜಯವಾಗಲಿ ಎಂದು ಹಾಕಿದ್ದ ಮಲ್ಲಿಕಾರ್ಜುನ. ಇದೇ ವೇಳೆ ಸುದೀರ್ಘ ಡೆತ್ ನೋಟ್ ಕೂಡ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳ ಕಳ್ಳಿ ಎಂದು ಅನುಮಾನ; ಮಾನಸಿಕ ಅಸ್ವಸ್ಥೆಗೆ ಗ್ರಾಮಸ್ಥರಿಂದ ಥಳಿತ
https://pragati.taskdun.com/latest/child-theftdoughtmental-illness-ladyattackvillagers/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ