ಪ್ರಗತಿವಾಹಿನಿ ಸುದ್ದಿ: ಮುಂಬರುವ IPL 18ನೇ ಆವೃತ್ತಿಗೆ RCB ನಾಯಕನ ಹೆಸರು ಘೋಷಣೆಯಾಗಿದೆ. ರಜತ್ ಪಾಟೀದಾರ್ ಅವರ ಹೆಸರನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಕಟಿಸಲಾಗಿದೆ. ಈ ನಾಯಕನ ನಾಯಕತ್ವದಲ್ಲಿಯಾದರೂ ಆರ್‌ಸಿಬಿ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಆಶಯ. ಕಳೆದ 3 ವರ್ಷಗಳಿಂದ ನಾಯಕರಾಗಿದ್ದ ಡುಪ್ಲೆಸಿಸ್ ಈ ಬಾರಿ ತಂಡದಲ್ಲಿ ರಿಟೇನ್ ಆಗಲಿಲ್ಲ.
ಹೌದು ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಅವರನ್ನು ಆರ್ ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಇದ್ದ ನಾಯಕ ಸ್ಥಾನಕ್ಕೆ ಇದೀಗ ರಜತ್ ಪಾಟೀದಾರ್ ಅವರನ್ನು ನೇಮಕ ಮಾಡಲಾಗಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ತಿಂಗಳು ಆರಂಭವಾಗಲಿದೆ. ಎಲ್ಲ ಫ್ರಾಂಚೈಸಿಗಳು ಈಗಾಗಲೇ ತಯಾರಿಯಲ್ಲಿ ತೊಡಗಿಕೊಂಡಿದ್ದು ನಾಯಕನ ಸ್ಥಾನದ ಆಯ್ಕೆಗಳು ಅಂತಿಮ ಘಟ್ಟದಲ್ಲಿ ಇಟ್ಟಿವೆ. ಇದರಲ್ಲಿ ಇದೀಗ ಬೆಂಗಳೂರು ಟೀಮ್ ನಾಯಕನ ಹೆಸರನ್ನು ಘೋಷಣೆ ಮಾಡಲಾಗಿದ್ದು, ರಜತ್ ಪಾಟಿದಾರ್ ಈ ಬಾರಿ ಆರ್ ಸಿಬಿ ಮುನ್ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ