Sports

*RCB ತಂಡಕ್ಕೆ ನೂತನ ಸಾರಥಿ ನೇಮಕ*

ಪ್ರಗತಿವಾಹಿನಿ ಸುದ್ದಿ: ಮುಂಬರುವ IPL 18ನೇ ಆವೃತ್ತಿಗೆ RCB ನಾಯಕನ ಹೆಸರು ಘೋಷಣೆಯಾಗಿದೆ. ರಜತ್ ಪಾಟೀದಾ‌ರ್ ಅವರ ಹೆಸರನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಕಟಿಸಲಾಗಿದೆ. ಈ ನಾಯಕನ ನಾಯಕತ್ವದಲ್ಲಿಯಾದರೂ ಆರ್‌ಸಿಬಿ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಆಶಯ. ಕಳೆದ 3 ವರ್ಷಗಳಿಂದ ನಾಯಕರಾಗಿದ್ದ ಡುಪ್ಲೆಸಿಸ್ ಈ ಬಾರಿ ತಂಡದಲ್ಲಿ ರಿಟೇನ್ ಆಗಲಿಲ್ಲ.

ಹೌದು ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಅವರನ್ನು ಆ‌ರ್ ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಇದ್ದ ನಾಯಕ ಸ್ಥಾನಕ್ಕೆ ಇದೀಗ ರಜತ್ ಪಾಟೀದಾ‌ರ್ ಅವರನ್ನು ನೇಮಕ ಮಾಡಲಾಗಿದೆ.

Home add -Advt

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ತಿಂಗಳು ಆರಂಭವಾಗಲಿದೆ. ಎಲ್ಲ ಫ್ರಾಂಚೈಸಿಗಳು ಈಗಾಗಲೇ ತಯಾರಿಯಲ್ಲಿ ತೊಡಗಿಕೊಂಡಿದ್ದು ನಾಯಕನ ಸ್ಥಾನದ ಆಯ್ಕೆಗಳು ಅಂತಿಮ ಘಟ್ಟದಲ್ಲಿ ಇಟ್ಟಿವೆ. ಇದರಲ್ಲಿ ಇದೀಗ ಬೆಂಗಳೂರು ಟೀಮ್ ನಾಯಕನ ಹೆಸರನ್ನು ಘೋಷಣೆ ಮಾಡಲಾಗಿದ್ದು, ರಜತ್ ಪಾಟಿದಾರ್ ಈ ಬಾರಿ ಆರ್ ಸಿಬಿ ಮುನ್ನಡೆಸಲಿದ್ದಾರೆ.

Related Articles

Back to top button