Karnataka News

*ಬಡ್ಡಿ ಕಟ್ಟಿಲ್ಲವೆಂದು ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ದುರುಳ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೊಬ್ಬ ಬಡ್ಡಿ ಕಟ್ಟಿಲ್ಲವೆಂದು ಆತನ ಅಪ್ರಾಪ್ತ ಮಗಳ ಮೇಲೆಯೇ ದುರುಳ ಅತ್ಯಾಚಾರವೆಸಗಿದ ಹೀನಾಯ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ನಡೆದಿದೆ.

ಆರೋಪಿಯನ್ನು ರವಿಕುಮಾರ್ (39) ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ 17 ವರ್ಷದ ಸಂತ್ರಸ್ತೆಯ ತಂದೆ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲ ಕೂಡ ತೀರಿಸಿದ್ದರು. ಬಾಕಿ ಉಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದನು.

Related Articles
Home add -Advt

ಇದೇ ಸಿಟ್ಟಿನಿಂದ ಈ ಹಿಂದೆ ಸಂತ್ರಸ್ತೆಗೆ ರವಿಕುಮಾರ್ ಕಿಸ್ ಕೊಟ್ಟಿದ್ದನು. ಜೊತೆಗೆ ಇದರ ಫೋಟೋ ತೆಗೆದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಕೂಡ ಹಾಕಿದ್ದನು. ಬಳಿಕ ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಹುಡುಗಿ ನೀಡಿದ ದೂರಿನಂತೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ರವಿಕುಮಾರ್‌ನನ್ನು ಬಂಧಿಸಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.

Related Articles

Back to top button