
ಪ್ರಗತಿವಾಹಿನಿ ಸುದ್ದಿ, ಮೈಸೂರು– ಸರಕಾರಿ ಶಾಲೆಯ ಹೆಡ್‌ಮಾಸ್ತರ್ ಒಬ್ಬ ಶಾಲಾ ಕೊಠಡಿಯಲ್ಲಿಯೇ ವಿದ್ಯಾರ್ಥಿನಿಯೊಬ್ಬಳನ್ನು ತಬ್ಬಿಕೊಂಡು ಮುದ್ದಾಡಿದ ಘಟನೆ ನಡೆದಿದೆ. ಈ ದೃಷ್ಯವನ್ನು ಕೊಠಡಿಯ ಹೊರಗಡೆಯಿಂದ ಕೆಲವರು ವಿಡಿಯೋ ಮತ್ತು ಫೋಟೊ ಮಾಡಿದ್ದಾರೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಸರಕಾರಿ ಶಾಲೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ವಿಡಿಯೋ ಮಾಡುವುದನ್ನು ಗಮನಸಿದ ಹೆಡ್‌ಮಾಸ್ತರ್ ಗಾಬರಿಯಿಂದ ವಿದ್ಯಾರ್ಥಿಯನ್ನು ಬಿಟ್ಟಿದ್ದಾನೆ. ಬಳಿಕ ವಿದ್ಯಾರ್ಥಿನಿ ಕೊಠಡಿಯಿಂದ ಹೊರನಡೆದಿದ್ದಾಳೆ.
ಶಿಕ್ಷಕನ ಕೃತ್ಯದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಬಿಇಒಗೆ ದೂರು ನೀಡಲಾಗಿದೆ.
ಶಿರಸಿ ಫೋಕ್ಸೋ ಪ್ರಕರಣ: ಸಾಕು ಮಗಳ ಮೇಲೆಯೇ ಅತ್ಯಾಚಾರಗೈದವನಿಗೆ 20 ವರ್ಷ ಶಿಕ್ಷೆ; 9 ತಿಂಗಳಲ್ಲೇ ತೀರ್ಪು