Kannada NewsLatestUncategorized

*ಬೆಳಗಾವಿ ಮೂಲದ ಆರೋಗ್ಯಾಧಿಕಾರಿ ಆತ್ಮಹತ್ಯೆ; ಕಾರಣವೇನು?*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಸಮುದಾಯ ಆರೋಗ್ಯಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬಾಳಗಾನಹಳ್ಳಿಯ ಸರ್ಕಾರಿ ಆಸ್ಪತ್ರೆ ವಸತಿಗೃಹದಲ್ಲಿ ನಡೆದಿದೆ.

24 ವರ್ಷದ ಶಿವಾನಂದ ಜಕ್ಕಣ್ಣವರ್ ಆತ್ಮಹತ್ಯೆಗೆ ಶರಣಾದ ಆರೋಗ್ಯಾಧಿಕಾರಿ. ಶಿವಾನಂದ ಜಕ್ಕಣ್ಣವರ್ ಬೆಳಗಾವಿ ಜಿಲ್ಲೆಯ ಇಂಚಲ ಗ್ರಾಮದವರುಎಂದು ತಿಳಿದುಬಂದಿದೆ.

9 ತಿಂಗಳ ಹಿಂದಷ್ಟೇ ಬಾಳಗಾನಹಳ್ಳಿಯ ಸಮುದಾಯ ಆರೋಗ್ಯಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ ಈಗ ಮಾಸ್ತಿ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮುದಾಯ ಆರೋಗ್ಯಾಧಿಕಾರಿಯ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

*ಸೇನಾ ಹೆಲಿಕಾಪ್ಟರ್ ಪತನ; ಸಚಿವರು ಸೇರಿ 16 ಜನರ ದುರ್ಮರಣ*

https://pragati.taskdun.com/russia-ukraine-warukrainian-helicopter-crashkyiv16-people-killed-including-interior-ministry-officials/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button