
ಪ್ರಗತಿವಾಹಿನಿ ಸುದ್ದಿ: ವಿಶ್ರಾಂತಿಗೆಂದು ಠಾಣೆಯಿಂದ ಮನೆಗೆ ಹೋಗಿದ್ದ ಎಎಸ್ಐ ಓರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲಿ ನಡೆದಿದೆ.
ಎಎಸ್ಐ ಚಂದ್ರಕಾಂತ್ ಹುಟಗಿ ಹೃದಯಾಘಾತದಿಂದ ಸಾವನ್ನಪ್ಪಿದವರು. ಕಲಘಟಗಿ ಎಎಸ್ಐ ಆಗಿದ್ದ ಚಂದ್ರಕಾಂತ್ ಪೊಲ್ಸ್ ಠಾಣೆಯಿಂದ ಮನೆಗೆ ವಿಶ್ರಾಂತಿಗೆಂದು ಹೋದವರು ಅಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಯಾವುದೇ ಅನಾರೋಗ್ಯ ಸಮಸ್ಯೆಯೂ ಇರಲಿಲ್ಲ. ಆರೋಗ್ಯದಿಂದ ಇದ್ದ ಎ ಎಸ್ ಐ ಏಕಾಏಕಿ ಮೃತಪಟ್ಟಿದ್ದು, ಕುಟುಂಬಕ್ಕೆ ಹಾಗೂ ಹಿರಿಯ ಅಧಿಕಾರಿಗಳಿಗೂ ಶಾಕ್ ತಂದಿದೆ.


