
ಪ್ರಗತಿವಾಹಿನಿ ಸುದ್ದಿ: ಮದುವೆಗೆ ಒಂದು ದಿನ ಮೊದಲು ನವವಧು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನವವಧು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಶೃತಿ (32) ಮೃತ ವಧು. ನಾಳೆ ಶೃತಿ ವಿವಾಹ ನಿಗದಿಯಾಗಿತ್ತು. ತರೀಕೆರೆ ನಿವಾಸಿ ದಿಲೀಪ್ ಅವರೊಂದಿಗೆ ಮದುವೆಯಾಗಬೇಕಿತ್ತು.
ತರೀಕೆರೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಾಳೆ ಮದುವೆ ನಡೆಯಬೇಕಿತ್ತು. ಇಂದು ವಧು-ವರರ ಮನೆಯಲ್ಲಿ ಮದುವೆ ಸಂಭ್ರಮ ಕಟೆಕಟ್ಟಿರುವುವಾಗಲೇ ವಧುವಿನ ಸಾವಿನ ಸುದ್ದಿ ಬರಸಿಡಿಲಂತೆ ಬಡಿದಿದೆ. ಮನೆಯಲ್ಲಿ ಮದುವೆ ಸಿದ್ಧತೆಯಲ್ಲಿದ್ದ ವಧು ಶೃತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ದುಃಖ ಆವರಿಸಿದೆ.




