ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಭೂ ಕುಸಿತ: ಕೇಂದ್ರದ ನೆರವು ಕೋರಿದ ಜಿಲ್ಲಾಡಳಿತ

ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲ

 

ಪ್ರಗತಿವಾಹಿನಿ ಸುದ್ದಿ, ಮಹಾಡ್ – ಮಹಾರಾಷ್ಟ್ರದ ಮಹಾಡ್ ತಾಲೂಕಿನ ಕಲ್ಲೈನಲ್ಲಿ ಉಂಟಾಗಿರುವ ಭೂ ಕುಸಿತದಲ್ಲಿ ಸಿಲುಕಿರುವವರೆ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ 300ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ.

ಎನ್ ಡಿಆರ್ ಎಫ್ ತಂಡ ಸತತ ಕಾರ್ಯಾಚರಣೆ ನಡೆಸಿದ್ದು, ಭಾರಿ ಮಳೆಯ ಕಾರಣದಿಂದ ನಿರೀಕ್ಷಿತ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೇಂದ್ರ ಸರಕಾರದ ನೆರವು ಕೇಳಲಾಗಿದೆ ಎಂದು ಅಲ್ಲಿನ ಜಿಲ್ಲಾಡಳಿತ ತಿಳಿಸಿದೆ.

ರತ್ನಾಗಿರಿ ಜಿಲ್ಲೆ ಬಹುತೇಕ ಜಲಾವೃತವಾಗಿದೆ. ಮಳೆ ಸತತವಾಗಿ ಮುಂದುವರಿದಿದೆ.

Home add -Advt

ಇನ್ನು 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಭೀಮಾ ಶಂಕರ ದೇವಸ್ಥಾನ ಕೂಡ ಜಲಾವೃತವಾಗಿದೆ.

ಇನ್ನೊಂದೆಡೆ ಚಿಖಿಲಿ ಜಲಾವೃತವಾಗಿದ್ದು, ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯ ಮುಂದುವರಿದಿದೆ.

 

ಮಹಾರಾಷ್ಟ್ರ : ರೈಲಿನಲ್ಲೇ ಸಿಲುಕಿದ 6,000 ಪ್ರಯಾಣಿಕರು; ಆಹಾರ, ನೀರು ಪೂರೈಕೆ

ಇನ್ನೂ ಪತ್ತೆಯಾಗದ ಶಿರ್ಲೆ ಫಾಲ್ಸ್ ಗೆ ತೆರಳಿದ್ದ 6 ಪ್ರವಾಸಿಗರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button