
ಪ್ರಗತಿವಾಹಿನಿ ಸುದ್ದಿ; ಯಲ್ಲಾಪುರ: ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಉಚಿತ ವಾಹನ ಸೇವೆಗೆ ಚಾಲನೆ ನೀಡಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಒಂದು ವಾಹನವನ್ನು ಉಚಿತವಾಗಿ ನೀಡಿದ್ದಾರೆ.
ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ” ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ” ಉಚಿತ ವಾಹನ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಗಾಂವ್ಕರ್, ಮುಂಡಗೋಡ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ವಿಜಯ ಮಿರಾಶಿ, ದ್ಯಾಮಣ್ಣ ದೊಡ್ಮನಿ, ರವಿಗೌಡ ಪಾಟೀಲ್, ದೇವು ಪಾಟೀಲ್, ಪ.ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ, ಉಪಾಧ್ಯಕ್ಷರಾದ ಶಾಮಲಿ ಪಾಟಣಕರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಮಿತ ಅಂಗಡಿ ಹಾಗೂ ಪಟ್ಟಣ ಪಂಚಾಯತ ಸದಸ್ಯರು, ಪಕ್ಷದ ವಿವಿಧಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ಸಂಖ್ಯೆ
+918050749099
+918050767599
ಇನ್ಮುಂದೆ ಸೋಂಕಿತರು ನೇರವಾಗಿ ಆಸ್ಪತ್ರೆಗೆ ದಾಖಲಾಗುವಂತಿಲ್ಲ