ಪ್ರಗತಿವಾಹಿನಿ ಸುದ್ದಿ; ಉಡುಪಿ: ಪ್ರಾಂಶುಪಾಲರು ಬೈದರು ಎಂಬ ಕಾರಣಕ್ಕೆ ಮನನೊಂದ ಪಿಯು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ನಡೆದಿದೆ.
ದೀಪ್ತಿ ಮೃತ ವಿದ್ಯಾರ್ಥಿನಿ. ದೀಪ್ತಿ ಉಡುಪಿ ಜಿಲ್ಲೆಯ ಹೆಬ್ರಿಯ ಎಸ್.ಆರ್.ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಕಾಲೇಜಿನಿಂದ ಬಂದ ವಿದ್ಯಾರ್ಥಿನಿ ಪೆರ್ಡೂರು ಗ್ರಾಮದ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಬಂದಿದ್ದಕ್ಕೆ ಪ್ರಾಂಶುಪಾಲರು ಇತರ ವಿದ್ಯಾರ್ಥಿಗಳ ಎದುರು ನಿಲ್ಲಿಸಿ ಬೈದಿದ್ದರಂತೆ. ಇದರಿಂದ ದೀಪ್ತಿ ತೀವ್ರವಾಗಿ ಮನನೊಂದಿದ್ದಳು. ಪ್ರಾಂಶುಪಾಲರು ಬೈದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೀಪ್ತಿ ಪೋಷಕರು ಆರೋಪಿಸಿದ್ದಾರೆ.
ದೀಪ್ತಿ ತಂದೆ ಸುರೇಶ್ ಮೆಂಡನ್ ಕಾಲೇಜು ಪ್ರಿನ್ಸಿಪಾಲರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://pragati.taskdun.com/gang-rapegirlbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ