Karnataka News

*ಪರಿಹಾರ ನೀಡಲು ಹಿಂದೇಟು: ಡಿಸಿ ಕಾರು ಮುಟ್ಟುಗೊಲು ಹಾಕಿಲು ಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ: ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ನೀಡದ ಕಾರಣ ಕೊಪ್ಪಳ ಜಿಲ್ಲಾಧಿಕಾರಿಯವರ ಅಧಿಕೃತ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೋಗಿದ್ದ ನ್ಯಾಯಾಲಯ ಸಿಬ್ಬಂದಿಗೆ ನಿರಾಶೆಯಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆವರೆಗೆ ರಸ್ತೆ ಅಗಲೀಕರಣ ಮಾಡಲಾಗಿದೆ. ಈ ವೇಳೆ ಗಂಗಾವತಿಯ ಕಲ್ಮಠ ಹಾಗೂ ವೀರುಪಾಕ್ಷಪ್ಪ ಅವರ ಭೂಮಿ ಒತ್ತುವರಿ ಮಾಡಿ ರಸ್ತೆ ಅಗಲೀಕರಣ ಮಾಡಲಾಗಿದೆ. ಮಾಲೀಕರಿಗೆ ಮಾಹಿತಿ ನೀಡದೇ ರಸ್ತೆ ಅಗಲೀಕರಣ ಮಾಡಿದ್ದು, ಮತ್ತು ಪರಿಹಾರ ಕೊಡದ ಹಿನ್ನೆಲೆ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.

ಸುದೀರ್ಘ 6 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಕೋರ್ಟ್‌ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡಲು ಆದೇಶ ಮಾಡಿತ್ತು. ವಿಚಾರಣೆ ಮಾಡಿದ ಬಳಿಕ ಕಲ್ಮಠಕ್ಕೆ ಸುಮಾರು 7 ಲಕ್ಷ ರೂ. ವಿರೂಪಾಕ್ಷಪ್ಪ ಅವರಿಗೆ ಪರಿಹಾರ ನೀಡಲು ಆದೇಶ ಮಾಡಿತ್ತು. 

ಇದುವರೆಗೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಮಾಲೀಕರು ಮತ್ತೊಮ್ಮೆ ಕೋರ್ಟ್ ಮೊರೆ ಹೋದಾಗ ಗಂಗಾವತಿಯ ಹಿರಿಯ ಶ್ರೇಣಿಯ ನ್ಯಾಯಾಲಯ ಕಾರು ಜಪ್ತಿ ಮಾಡಲು ಆದೇಶ ನೀಡಿತ್ತು.

ಜಿಲ್ಲಾಧಿಕಾರಿ ನಳಿನ್ ಅತುಲ್ ಅವರ ವಾಹನದ ಕೀಲಿಯನ್ನು ನೀಡಲು ನಿರಾಕರಿಸಿದ್ದರಿಂದ ಕಾರನ್ನು ವಶಪಡಿಸಿಕೊಳ್ಳಲು ಹೋಗಿದ್ದ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಖಾಲಿ ಕೈಯಲ್ಲಿ ಹಿಂತಿರುಗಬೇಕಾಯಿತು. 

ವಕೀಲರಾದ ಸಂಜಯ್ ಬಿ ಚಾನೆಲ್, ರಾಮಣ್ಣ ಸೋದ್ರ ಮತ್ತು ಉಮೇಶ್ ಡಿ ಅವರು ಕಾರನ್ನು ವಶಪಡಿಸಿಕೊಳ್ಳಲು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಜಿಲ್ಲಾಧಿಕಾರಿ ಕೀಲಿಗಳನ್ನು ನೀಡಲು ನಿರಾಕರಿಸಿದಾಗ, ವಕೀಲರು ವಾಹನವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಕಾರನ್ನು ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಅವರು ಅಲ್ಲಿಂದ ಹೊರಟುಹೋದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button