Latest

ಪ್ರಧಾನಿ ಮೋದಿ ಜನ್ಮದಿನದಂದು ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ; ಬಿಜೆಪಿ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ತಮಿಳುನಾಡಿನ ರಾಜ್ಯ ಬಿಜೆಪಿ ಘಟಕ ನಾಳೆ ಜನಿಸುವ ಮಗುವಿಗೆ ಚಿನ್ನದ ಉಂಗುರ ನೀಡುವುದಾಗಿ ಘೋಷಿಸಿದೆ.

ಹೌದು.ಚೆನ್ನೈನ ಆರ್ ಎಸ್ ಆರ್ ಎಂ ಆಸ್ಪತ್ರೆಯಲ್ಲಿ ಸೆ.17ರಂದು ಜನಿಸುವ ಮಗುವಿಗೆ ನರೇಂದ್ರ ಮೋದಿ ಹೆಸರಲ್ಲಿ ಎರಡು ಗ್ರಾಂ ಚಿನ್ನದ ಉಂಗುರ ನೀಡಲಾಗುವುದು ಎಂದು ಕೇಂದ್ರದ ಮಾಹಿತಿ, ಪ್ರಸಾರ ಹಾಗೂ ಮೀನುಗಾರಿಕಾ ರಾಜ್ಯ ಸಚಿವ ಎಲ್.ಮುರುಗನ್ ತಿಳಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ನಾಳೆ 10ರಿಂದ 17 ಮಕ್ಕಳು ಜನಿಸುವ ನಿರೀಕ್ಷೆ ಇದೆ. ಪಕ್ಷದ ರಾಜ್ಯ ಘಟಕದ ವತಿಯಿಂದ ಮೋದಿಯವರ 72ನೇ ಜನ್ಮದಿನದ ಅಂಗವಾಗಿ 720 ಕೆಜಿ ಮೀನುಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕಾಗಿ ಸಿಎಂ ಎಂ.ಕೆ.ಸ್ಟಾಲಿನ್ ಅವರ ಕ್ಷೇತ್ರ ಕೊಳತ್ತೂರು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಜನ್ಮದಿನ ಹಿನ್ನೆಲೆ; ಸೇವಾ ಪಾಕ್ಷಿಕ ಕಾರ್ಯಕ್ರಮದ ಬಗ್ಗೆ ಡಾ.ರಾಜೇಶ್ ನೇರ್ಲಿ ಮಾಹಿತಿ

https://pragati.taskdun.com/latest/pm-narendra-modibirtdaydr-rajesh-nerlimeetingchikkodi/

Home add -Advt

Related Articles

Back to top button