*ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕೇಸ್*: *ಕೇಂದ್ರ ಸಚಿವರ ಮನೆಯಲ್ಲಿಯೇ ಮೊಬೈಲ್ ಎಕ್ಸ್ ಚೇಂಜ್*: *ಸ್ಫೋಟಕ ಮಾಹಿತಿ ನೀಡಿದ ಕಮಿಷ್ನರ್*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೇಂದ್ರ ಸಚಿವರ ಮನೆಯಲ್ಲಿಯೇ ಮೊಬೈಲ್ ಎಕ್ಸ್ ಚೇಂಜ್ ಮಾಡಾಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚ್ವ ಹೆಚ್.ಡಿ.ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ಎಕ್ಸ್ ಚೇಂಜ್ ಮಾಡಲಾಗಿದೆ. ಬಂಧಿತ ಆರೋಪಿ ರಿತೇಶ್ ಪಾಂಡೆ ಈ ವಿಚಾರ ಬಾಯ್ಬಿಟ್ಟಿದ್ದು, ಈಗಾಗಲೇ ಆತನ ಹೇಳಿಕೆ ದಾಅಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದರು.
ಪ್ರಜ್ವಲ್ ಪ್ರಸಾದ್ ಎಂಬಾತನ ಸೂಚನೆ ಮೇರೆಗೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದಾಗಿ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್ ನೀಡಿದ್ದಾಗಿ ಹೇಳಿದ್ದಾನೆ. ತಾನೇ ಕುಮಾರಸ್ವಾಮಿ ಮನೆ ಬಳಿ ಹೋಗಿದ್ದಾಯೂ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರವಾಗಿ ಹಲವು ಗಂಭೀರ ಆರೋಪ ಮಾಡಿ, ಸಿಎಂ ಡಿ.ಕೆ.ಶಿವಕುಮಾರ್ ಮೇಲೂ ಆರೋಪಗಳನ್ನು ಹೊರಿಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನೆಯಲ್ಲಿಯೇ ಮೊಬೈಲ್ ಎಕ್ಸ್ ಚೇಂಜ್ ಮಾಡಲಾಗಿದೆ ಎಂಬ ವಿಚಾರ ಇದೀಗ ಬಯಲಾಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.




