*ಪ್ರಯಾಣಿಕರಿಗೆ ಗುಡ್ ನ್ಯೂಸ್*: *ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿಂದು ಇಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಹ್ಲಾದ್ ಜೋಶಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದರು.
ಈ ವೇಳೆ ಸಚಿವಾರದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಹೆಚ್,ಡಿ ಕುಮಾರಸ್ವಾಮಿ, ಸಂಸದ ತೇಜಸ್ವಿಸೂರ್ಯ, ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಬೆಂಗಳೂರು-ಮುಂಬೈ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಮೊದಲಿಗೆ ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಹೇಳಿದ್ದು, ನಾನು ಕನ್ನಡ ಕಲಿಯಬೇಕು ಎಂದು ಆಸೆ ವ್ಯಕ್ತಪಡಿಸಿದರು.
ಬುಲೆಟ್ ರೈಲು ಯೋಜನೆ ಮುಗಿದಿದ್ದು, ಬೆಂಗಳೂರು- ಚೆನ್ನೈಗೆ ಈ ಹೈ ಸ್ಪೀಡ್ ರೈಲು ಓಡಾಡಲಿದೆ. 73 ನಿಮಿಷದಲ್ಲಿ ಚೆನ್ನೈಗೆ ತಲುಪಲಿದೆ. 2 ಗಂಟೆ 10 ನಿಮಿಷದಲ್ಲಿ ಹೈದ್ರಾಬಾದ್ ಗೆ ಈ ರೈಲು ತಲುಪಲಿದೆ. ಬೆಂಗಳೂರು ದೊಡ್ಡ ನಗರ, ಹೈ ಸ್ಪೀಡ್ ರೈಲು ಹುಬ್ಬಳ್ಳಿ ಭಾಗಗಳಿಗೆ ತಲುಪಿಸಲಾಗುತ್ತದೆ. ಬೆಂಗಳೂರು – ಮಂಗಳೂರಿಗೂ ವಂದೇ ಭಾರತ್ ಸಂಚಾರಕ್ಕೆ ಎಲ್ಲಾ ಕೆಲಸ ಮುಗಿದಿದ್ದು, ವಿದ್ಯುಚ್ಛಕ್ತಿ ಕೆಲಸ ಅಂತಿಮ ಹಂತದಲ್ಲಿದೆ. ನಾಲ್ಕು ವಾರದಲ್ಲಿ ಸಂಚಾರ ಆರಂಭ ಆಗುತ್ತೆ. ಜಗತ್ತಿನಲ್ಲಿ ಭಾರತವನ್ನು ವಿಶ್ವಾಸ, ಸತ್ಯದಿಂದ ನೋಡ್ತಿದೆ. ಮಿಲಟರಿ, ಎಲೆಕ್ಟ್ರಿಕ್ಸ್ ನಲ್ಲಿ ಭಾರತ ಅಭಿವೃದ್ಧಿ ಯಾಗ್ತಿದೆ. ಇದೆಲ್ಲವೂ ಮೋದಿಯಿಂದ ಸಾಧ್ಯವಾಗಿದ್ದು ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆ
ಇದೇ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ವಂದೇ ಭಾರತ್, ನಮೋ ಭಾರತ್ ಉಪಯೋಗ ಎಲ್ಲರಿಗೆ ತಲುಪುತ್ತಿದೆ. ಐಟಿ ನಗರ ಬೆಂಗಳೂರಿನಿಂದ ಆದಾಯ ನಗರ ಮುಂಬೈಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶದ ಅನಂತಪುರ , ಕರ್ನಾಟಕದ ರಾಯಚೂರು, ಕಲ್ಬುರ್ಗಿ ಮೂಲಕ ಮುಂಬೈಗೆ ತಲುಪುತ್ತೆ. ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಕರ್ನಾಟಕಕ್ಕೆ ಸಿಗಲಿದೆ. ಬೆಂಗಳೂರು – ಹುಬ್ಬಳ್ಳಿ ಮೂಲಕ ಪೂಣೆ, ಮುಂಬೈಗೆ ತೆರಳಲಿದೆ. ಇದರೊಂದಿಗೆ ಪ್ರಹ್ಲಾದ್ ಜೋಶಿಯವರ ಬೇಡಿಕೆ ಈಡೇರಿದೆ ಎಂದರು.



