ಪ್ರಗತಿವಾಹಿನಿ ಸುದ್ದಿ, ಮುಂಬೈ –ಇದು ನಂಬಲು ಅಸಾಧ್ಯವಾದ ಸುದ್ದಿ. ಆದರೆ ಅಷ್ಟೇ ಸತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸುತ್ತಿರುವ ಸುದ್ದಿ ಇದು.
ಕಲರ್ಸ್ ಹಿಂದಿ ಚಾನೆಲ್ ಬಿಗ್ ಬಾಸ್ ಶೋ ನಡೆಸುತ್ತಿದೆ. ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಶೋ ಇದು. ಸದಾ ವಿವಾದದ ಮೂಲಕವೇ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎನ್ನುವ ಆರೋಪ ಈ ಶೋ ಗೆ ಹಿಂದಿನಿಂದಲೂ ಇದೆ.
ಇದೀಗ ಸಲ್ಮಾನ್ ಖಾನ್ ಬಿಗ್ ಬಾಸ್ ಶೋ ನಲ್ಲಿ ಬಾಗವಹಿಸಿದವರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಹಿಂದೂ ಯುವತಿಯೋರ್ವಳು ಮುಸ್ಲಿಂ ಯುವಕನ ಜೊತೆ ಮಲಗಬೇಕೆನ್ನುವುದು ಈ ಟಾಸ್ಕ್. ಇದು ಭಾರೀ ವಿವಾದ ಹುಟ್ಟು ಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಹ್ಯಾಷ್ ಟ್ಯಾಗ್ ಬಳಸಿ ಬ್ಯಾನ್ ಬಿಗ್ ಬಾಸ್ ಎನ್ನುತ್ತಿದ್ದಾರೆ. ಚಾನೆಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸುತ್ತಿದ್ದಾರೆ. ಇಂತಹ ಅಸಂಬದ್ಧ ಶೋ ನಡೆಸುವವರನ್ನು ಬಂದಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದು ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡುತ್ತಿದೆ. ಈ ಚಾನೆಲ್ ವೇಶ್ಯಾಲಯವಾಗುತ್ತಿದೆ. ತುರ್ತು ಕ್ರಮ ಅಗತ್ಯವಿದೆ ಎಂದೆಲ್ಲ ಜನ ಕಿಡಿಕಾರುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ