Kannada NewsKarnataka News

ಮಾ.20ರಂದು ಹಿರೇಬಾಗೇವಾಡಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರೇ ಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ​ಸ್ಥಾಪಿಸಲಾಗಿರುವ ​ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ಅಶ್ವಾರೂಢ ಮೂರ್ತಿಯ​ನ್ನು ಮಾರ್ಚ್ 20ರಂದು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ.​​

​ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ​​ಮಂಗಳವಾರ ಗ್ರಾಮದ ಎಲ್ಲ ಸಮಾಜಗಳ ಹಿರಿಯರ​ ಜೊತೆ ನಡೆಸಿದ ಸಭೆಯಲ್ಲಿ​ ಒಮ್ಮತದ ಮೇರೆಗೆ ಮೂರ್ತಿಯ ಉದ್ಘಾಟನೆಯನ್ನು ಇದೇ ತಿಂಗಳು 20 ರಂದು ​ನಡೆಸಲು ನಿರ್ಧರಿಸಲಾಯಿತು. 

ಈ ಸಮಯದಲ್ಲಿ ಸುರೇಶ ಇಟಗಿ, ಸಿ ಸಿ ಪಾಟೀಲ ಅಣ್ಣ, ಅಡಿವೇಶ ಇಟಗಿ, ಶ್ರೀಕಾಂತ ಮಧುಭರಮಣ್ಣವರ, ಈರಪ್ಪ ಅರಳೀಕಟ್ಟಿ, ಪಿ ಎನ್ ಪಾಟೀಲ, ರಘು ಅಂಕಲಗಿ, ಶಿವಾನಂದ ಅಂಕಲಗಿ, ಉಳವಪ್ಪ ರೊಟ್ಟಿ, ಬಸವರಾಜ ತೋಟಗಿ, ನಾಗರಾಜ ಉಪ್ಪಾರ, ರಾಜಶೇಖರ ಸಾಲಿಮನಿ, ನಿಂಗಪ್ಪ ತಳವಾರ, ಗೌಸಮೊದ್ದಿನ ಜಾಲಿಕೊಪ್ಪ, ಮಹ್ಮದಲಿ ಕರಿದಾವಲ್, ಯಲ್ಲಪ್ಪ ಕೆಳಗೇರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button