ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಇದೀಗ ಸ್ವತಃ ಪೊಲೀಸರ ಬಲೆಗೆ ಸಿಲುಕಿದ್ದಾಳೆ.

ಆರೋಪಿಯನ್ನು ಅರ್ಚನಾ ನಾಗ್ (18) ಎಂದು ಗುರುತಿಸಲಾಗಿದೆ. ಧಾಮ್ ನಗರ ಉಪಚುನಾವಣೆಗೂ ಮುನ್ನವೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಈಕೆ  18 ಶಾಸಕರೂ ಸೇರಿದಂತೆ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಹನಿ ಟ್ರ್ಯಾಪ್ ಗೆ ಸಿಲುಕಿಸಿ ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಳು ಎನ್ನಲಾಗಿದೆ.

ಈಕೆಯಿಂದ ಹನಿ ಟ್ರ್ಯಾಪ್ ಗೆ ಒಳಗಾದವರಲ್ಲಿ ಬಹುಪಾಲು ಶಾಸಕರು ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ನೇತೃತ್ವದ ಬಿಜೆಡಿ ಸರಕಾರದ ಸದಸ್ಯರಾಗಿದ್ದಾರೆ. ಹೀಗಾಗಿ ಈ ಪ್ರಕರಣ ಒಡಿಶಾ ರಾಜ್ಯಾದ್ಯಂತ ಭಾರೀ ತಲ್ಲಣ ಸೃಷ್ಟಿಸಿತ್ತು.

ಏತನ್ಮಧ್ಯೆ ಅರ್ಚನಾ ಹಾಗೂ ಆಕೆಯ ಪತಿ ಜಗಬಂಧು ಚಂದ್ ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳೊಂದಿಗೆ ಇರುವ ಫೋಟೊಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಒಡಿಶಾದ ಚಲನಚಿತ್ರನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಬಲೆಗೆ ಕೆಡವಲು ಹೂಡಿದ್ದ ಸಂಚು ವಿಫಲವಾಗುತ್ತಿದ್ದಂತೆ ಇವರ ಕರಾಮತ್ತುಗಳು ಬಹಿರಂಗವಾಗಿವೆ.

ಪ್ರಕರಣದ ಸಮಗ್ರ ತನಿಖೆಗೆ ಒಡಿಶಾ ಬಿಜೆಪಿ ನಾಯಕ ಪ್ರತಾಪ್ ಸಾರಂಗಿ ಒತ್ತಾಯಿಸಿದ್ದಾರೆ. ಪ್ರಸ್ತುತ ಯುವತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ.

ಪುಣ್ಯಕೋಟಿ ಯೋಜನೆಗೆ ಸರಕಾರಿ ನೌಕರರಿಂದ 100 ಕೋಟಿ ದೇಣಿಗೆ; ಒಂದು ದಿನದ ಸಂಬಳ ನೀಡಲು ನಿರ್ಧಾರ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button