ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ಸಿಸಿಬಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹನಿಟ್ರ್ಯಾಪ್ ಮೂಲಕ ದರೋಡೆಗೆ ಯತ್ನಿಸಿದ್ದ 7 ಜನ ಖದೀಮರು ಸಿಕ್ಕಿಬಿದ್ದಿದ್ದಾರೆ.
ಹುಡುಗಿಯ ಫೋಟೋ ತೋರಿಸಿ ಆಕೆಯೊಂದಿಗೆ ಸಲುಗೆ ಬೆಳೆಸಲು ಅನುವು ಮಾಡಿಕೊಟ್ಟು, ಅದರ ವೀಡಿಯೋ ಮಾಡಿ, 50 ಸಾವಿರ ರೂ ನೀಡುವಂತೆ ಬ್ಲ್ಯಾಕ್ ಮೇಲೆ ಮಾಡಿ ದರೋಡೆ ಮಾಡಿದ ಹಿನ್ನೆಲೆಯಲ್ಲಿ ಮನೋಜ ಬರಮಾ ಪಾಟೀಲ ಎನ್ನುವವರು ದೂರು ನೀಡಿದ್ದರು.
ವಿದ್ಯಾ ಅಲಿಯಾಸ್ ಸಾರಿಕಾ ಪಾಂಡುರಂಗ ಹವಾಲ್ದಾರ, ಮಹದ್ವಾ ರೋಡ್ ನ ದೀಪಾ ಸಂದೀಪ್ ಪಾಟೀಲ, ಕೋರೆ ಗಲ್ಲಿಯ ಮಂಗಲಾ ದಿನೇಶ ಪಾಟೀಲ, ಹಲಗಾದ ಮನೋಹರ ಅಪ್ಪಾಸಾಬ್ ಪಾಯಕ್ಕನವರ್, ಬಸವನಕುಡಚಿ ದೇವರಾಜ ಅರಸು ಕಾಲನಿಯ ನಾಗರಾಜ ರಾಮಚಂದ್ರ ಕಡಕೋಳ (ಈತ ರಕ್ಷಣಾ ವೇದಿಕೆ ಕಾರ್ಯಕರ್ತ ಮತ್ತು ಪತ್ರಿಕೆಯೊಂದರ ವರದಿಗಾರ), ಸಹ್ಯಾದ್ರಿ ನಗರದ ಸಚಿನ್ ಮಾರುತಿ ಸುತಗಟ್ಟಿ, ಇಟಗಿಯ ಮಹಮದ್ ಯೂಸೂಪ್ ಮೀರಾಸಾಬ್ ಕಿತ್ತೂರು ಬಂಧಿತರು.
ಎಸಿಪಿಗಳಾದ ನಾರಾಯಣ ಬರಮನಿ ಹಾಗೂ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಸಿಸಿಬಿ ಪೊಲೀಸ್ ಇನಸ್ಪೆಕ್ಟರ್ ಸಂಜೀವ್ ಕಾಂಬಳೆ, ಮಾರ್ಕೆಟ್ ಇನಸ್ಪೆಕ್ಟರ್ ಶಿವಯೋಗಿ ಮತ್ತು ತಂಡ ಕಾರ್ಯಾಚರಣೆ ನಡೆಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ