Kannada NewsKarnataka News

*ಭೀಕರ ಅಪಘಾತ: 6 ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ತೂಮಕುರ ಜಿಲ್ಲೆಯ ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ ಮಧುಗಿರಿ ಗಡಿ ಭಾಗದ ಕೆ ಶಿಫ್ ರಸ್ತೆಯ ಸಮೀಪದ ಕಾಟಗಾನ ಹಟ್ಟಿಯ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಮೃತ ಪಟ್ಟಿದ್ದಾರೆ.

ಪಾವಗಡದ ಎತ್ತನಹಳ್ಳಿ ಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿ ನಿಂದ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಪರಸ್ಪರ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಪಾವಗಡ ತಾಲೂಕಿನ ಎತ್ತನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ ( 50) ಇವರ ಪುತ್ರಿ ಸಿಂಧೂ (40) ಮಗ ಟ್ರಯಾಕ್ ದೇವಾ (8) ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದವರಾದ ಚಾಲಕ ಸಿದ್ದಗಂಗಪ್ಪ (34) ಹಾಗೂ ನಾಗರಾಜು (30) ಸೇರಿ ಒಟ್ಟು 4 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರಾಯಕ್ಸ್ ದೇವಾ (8) ವರ್ಷದ ಗಂಡು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

Home add -Advt

ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ಎತ್ತಿನಹಳ್ಳಿಯ ಗೀತಾ (38) ಅವರ ಪುತ್ರ ಯೋಧ, ಚಾಲಕ ಆನಂದ್‌ ಹಾಗೂ ಮೃತ ಸಿಂಧೂ ರವರ ಒಂದು ವರ್ಷ ಪ್ರಾಯದ ಗಂಡು ಮಗು ವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮದುಗಿರಿ ಪೊಲೀಸರು ಬೇಟಿ ನೀಡಿದ್ದಾರೆ.

Related Articles

Back to top button