Latest

ತನ್ನದೇ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಉಡುಪಿ ಉದ್ಯಮಿ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮೂಲದ ಹೋಟೆಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ಹೋಟೆಲ್ ನಲ್ಲಿ ನಡೆದಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಹೋಟೆಲ್ ಉದ್ಯಮಗಳು ಬಾಗಿಲು ಮುಚ್ಚಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮೂಲದ ಮುಂಬೈ ಹೋಟೆಲ್ ಉದ್ಯಮಿ ವಿರಾರ್ ಕರುಣಾಕರ್ ಪುತ್ರನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

Home add -Advt

ವಿರಾರ್ ಪುತ್ರನ್ ಉಡುಪಿ ಮೂಲದ ಬಜೆಗೋಳಿ ಮೂಲದವರಾಗಿದ್ದು, ಮುಂಬೈನಲ್ಲಿ ಸ್ಟಾರ್ ಹೋಟೆಲ್ ಪ್ಲಾನೆಟ್ ನಡೆಸುತ್ತಿದ್ದರು. ತಮ್ಮದೇ ಹೋಟೆಲ್ ರೂಂ ನಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಟಾರ್ ಹೋಟೆಲ್ ಪ್ಲಾನೆಟ್ ನ್ನು ಬೇರೆಯವರಿಂದ ಬಾಡಿಗೆಗೆ ಪಡೆದು ನಡೆಸುತ್ತಿದ್ದರು. ಆದರೆ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ ಹೆಚ್ಚಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜೋಕಾಲಿ ಆಡುತ್ತಿದ್ದಾಗ ಉರುಳಾದ ಸೀರೆ; ಬಾಲಕ ದಾರುಣ ಸಾವು

Related Articles

Back to top button